ಜಿಲ್ಲೆಯ 65 ಬ್ಲಾಕ್‌ಗಳ ಮರಳು ಟೆಂಡರ್ ರದ್ದು ಮಾಡಿಜಿಲ್ಲೆಯ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳಲ್ಲಿ ಗುರುತಿಸಿರುವ 65 ಬ್ಲಾಕ್‌ಗಳನ್ನು ಐದು ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಜಿಲ್ಲಾ ಮರಳು ಸಮಿತಿಯ ನಿರ್ಣಯ ತೆಗೆದುಕೊಂಡಿರುವುದು ಆಕ್ಷೇಪಾರ್ಹವಾಗಿದ್ದು, ಜಿಲ್ಲಾಡಳಿತ ಇದನ್ನು ಮರು ಪರಿಶೀಲನೆ ಮಾಡಿ, ಟೆಂಡರ್ ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ಜನಸಂಗ್ರಾಮ ಪರಿಷತ್ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಆಗ್ರಹಿಸಿದರು.