ಕಳೆಗುಂದಿದ ಮಹಿಮರಂಗನ ದನಗಳ ಜಾತ್ರೆ60 ವರ್ಷಗಳ ಹಿಂದೆ 10 ಸಾವಿರಕ್ಕೂ ಅಧಿಕ ರಾಸುಗಳಿಂದ ಕೂಡಿದ್ದ ಮಹಿಮರಂಗನ ದನಗಳ ಜಾತ್ರೆ ಇಂದು ಕೇವಲ ಬೆರಳೆಣಿಕೆಯಷ್ಟು ಮಾತ್ರಕ್ಕೆ ಬಂದು ನಿಂತಿದೆ. ಕೊಂಬಿಗೆ ಕಳಶ, ಕಾಲಿಗೆ ಗೆಜ್ಜೆ, ಕೊರಳಿಗೆ ಕರಿದಾರ ಕಟ್ಟಿ ರಾಸುಗಳನ್ನು ಕಟ್ಟುವ ಜಾಗಕ್ಕೆ ಪೈಪೋಟಿ, ಜಾತ್ರೆಗೆ ಪಾತ್ರೆ, ಸೌದೆ, ಆಹಾರ ಪದಾರ್ಥಗಳೊಂದಿಗೆ ಎತ್ತಿನಗಾಡಿಯೊಂದಿಗೆ ಆಗಮಿಸುತ್ತಿದ್ದ ಜನರು ಇಂದು ಹಳ್ಳಿ ದನಗಳ ಜಾತ್ರೆಗಳಲ್ಲಿ ಹುಡುಕಿದರೂ ಸಿಗುತ್ತಿಲ್ಲ.