ಬಾಲರಾಮನಿಗಾಗಿ ಸಹಸ್ರಕೋಟಿ ಜಪ ಮಾಡೋಣಮಾಗಡಿ: ಅಯೋಧ್ಯದಲ್ಲಿ ಪ್ರತಿಷ್ಠಾಪಿಸಿರುವ ಬಾಲರಾಮನಿಗೆ 45 ದಿನಗಳ ಕಾಲ ಮಂಡಲ ಪೂಜೆ ನೆರವೇರಿಸಲಾಗುವುದು, ದೇಶದ ಸಾಧು, ಸಂತರು, ಅರ್ಚಕರು, ಪುರೋಹಿತರು ಮತ್ತು ಎಲ್ಲಾ ದೇವಸ್ಥಾನದ ಪೂಜಾರಿಗಳು ಪ್ರತಿನಿತ್ಯ ತಮ್ಮ ಪೂಜಾ ವಿಧಿ ವಿಧಾನಗಳ ಜೊತೆ ಸಹಸ್ರಕೋಟಿ ರಾಮ ಜಪ ಮಾಡುವ ಮೂಲಕ ಬಾಲರಾಮನಿಗೆ ಶಕ್ತಿ ತುಂಬಬೇಕಿದೆ ಎಂದು ಜಿಲ್ಲಾ ಬ್ರಾಹ್ಮಣ ಒಕ್ಕೂಟದ ಅಧ್ಯಕ್ಷ ರಾಘವೇಂದ್ರಮಯ್ಯ ಹೇಳಿದರು.