ಬೊಂಬೆನಾಡಿಗೂ ಶ್ರೀರಾಮನಿಗೂ ಉಂಟು ಬಾಂಧವ್ಯ!ಚನ್ನಪಟ್ಟಣ: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ವೇಲೆ ತಾಲೂಕಿನಲ್ಲಿ ಶ್ರೀರಾಮನ ಪಾದಸ್ಪರ್ಶಿ ಸ್ಥಳಗಳೂ ಮಹತ್ವ ಪಡೆದುಕೊಂಡಿವೆ. ದೊಡ್ಡಮಳೂರು ಶ್ರೀರಾಮಾಪ್ರಮೇಯ ಸ್ವಾಮಿ ದೇವಸ್ಥಾನ, ಕೂಡ್ಲೂರು ಶ್ರೀರಾಮನ ಮಂದಿರ ಹಾಗೂ ಸಿಂಗರಾಜಿಪುರ, ಹನಿಯೂರು ಗ್ರಾಮಗಳ ನಡುವೆ ಇರುವ ಶ್ರೀ ಗವಿರಂಗಸ್ಥಾಮಿ ಬೆಟ್ಟಕ್ಕೂ ಶ್ರೀರಾಮನಿಗೂ ಬಾಂಧವ್ಯವಿರುವ ಕುರುಹುಗಳಿವೆ.