ವಿದ್ಯೆಯಿಂದ ವಂಚಿಸಿ ಶೋಷಣೆ: ರಾಜರತ್ನ ಅಂಬೇಡ್ಕರ್ಕನಕಪುರ: ಶಿಕ್ಷಣ ದೊರೆಯದ ಕಾರಣ ಎಷ್ಟೋ ಜನರು ಸರಿಯಾದ ಯೋಚನೆ-ಯೋಜನೆಗಳಿಲ್ಲದೆ ಸಂಪತ್ತು ಗಳಿಕೆ, ಉನ್ನತ ಹುದ್ದೆಗಳಿಂದ ವಂಚಿತರಾದರು. ಇದನ್ನೇ ಉಪಯೋಗಿಸಿಕೊಂಡು ಹಿಂದೆ ರಾಜ-ಮಹಾರಾಜರು ನಮ್ಮನ್ನು ನಿರಂತರವಾಗಿ ವಿದ್ಯೆಯಿಂದ ವಂಚಿಸುತ್ತಾ, ಶೋಷಿಸುತ್ತಾ ಸಾಗಿದರು ಎಂದು ಡಾ. ಬಿ.ಆರ್ ಅಂಬೇಡ್ಕರ್ ಅವರ ಮೊಮ್ಮಗ ರಾಜರತ್ನ ಅಂಬೇಡ್ಕರ್ ತಿಳಿಸಿದರು.