ಪ್ರಾಚೀನ ಸ್ಮಾರಕಗಳ ರಕ್ಷಣೆ ನಮ್ಮೆಲ್ಲರ ಹೊಣೆಚನ್ನಪಟ್ಟಣ: ಹೊಸತನದ ಧಾವಂತದಲ್ಲಿ ಪ್ರಾಚೀನ ಸ್ಮಾರಕ, ಕಟ್ಟಡ, ವಸ್ತುಗಳು ನಾಶವಾಗಲು ಬಿಡಬಾರದು. ಪ್ರಾಚೀನ ಪರಂಪರೆ ಸಾರುವ ವಸ್ತುಗಳು ಮಾನವನ ವ್ಯಕ್ತಿತ್ವ ವಿಕಸನಕ್ಕೆ ಸಾಕ್ಷಿಯಾಗಿದ್ದು, ಅವು ಮುಂದಿನ ಪೀಳಿಗೆಗೂ ಉಳಿಯಬೇಕು ಎಂದು ಬಾಲಕರ ಸರ್ಕಾರಿ ಪ್ರೌಢಶಾಲೆ ಉಪಪ್ರಾಂಶುಪಾಲರಾದ ಆರ್.ಎನ್.ಗಿರಿಜಾ ತಿಳಿಸಿದರು.