ಜಲಶಕ್ತಿ ಸಚಿವಾಲಯಕ್ಕೆ ಸಾಧಕ ಬಾಧಕಗಳ ವರದಿ ಸಲ್ಲಿಸುವೆರಾಮನಗರ: ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ಹೆಚ್ಚು ಚೆಕ್ ಡ್ಯಾಂಗಳ ನಿರ್ಮಾಣ ಹಾಗೂ ತುಂತುರು ಹನಿ ನೀರಾವರಿ ಸಲಕರಣೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿತರಿಸುವಂತೆ ಬೇಡಿಕೆ ಬಂದಿದೆ. ಇದರ ಸಾಧಕ - ಭಾದಕಗಳ ವರದಿಯನ್ನು ಕೇಂದ್ರ ಸರ್ಕಾರದ ಜಲ ಶಕ್ತಿ ಸಚಿವಾಲಯಕ್ಕೆ ಸಲ್ಲಿಸುವುದಾಗಿ ಕೇಂದ್ರ ಜಲ ಸಂಪನ್ಮೂಲ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾತ್ ಭಾಯ್ ಸವಾಭಾಯ್ ಪಟೇಲ್ ಹೇಳಿದರು.