ಸಾರಾಂಶ
Request to open a library
ಹಿರಿಯೂರು: ತಾಲೂಕಿನ ದೊಡ್ಡ ಕಟ್ಟೆ ಗ್ರಾಮದಲ್ಲಿ ಸಾಕಷ್ಟು ಜನ ಓದುಗರು ಮತ್ತು ವಿದ್ಯಾರ್ಥಿಗಳಿದ್ದು ಇಲ್ಲಿ ಒಂದು ಸಾರ್ವಜನಿಕ ಗ್ರಂಥಾಲಯವನ್ನು ತೆರೆಯಬೇಕು ಎಂದು ದೊಡ್ಡಕಟ್ಟೆ ಗ್ರಾಮದ ನಿವಾಸಿ ಹೆಚ್ ಲಕ್ಷ್ಮಿಕಾಂತ್ ಅವರು ಮನವಿ ಮಾಡಿದ್ದಾರೆ. ಗ್ರಾಮದಲ್ಲಿ ಸಾಕಷ್ಟು ಜನ ಪತ್ರಿಕೆಗಳನ್ನು ಓದುವ ಮತ್ತು ಪುಸ್ತಕಗಳನ್ನು ಓದುವ ಆಸಕ್ತಿಯಿರುವ ಜನರಿದ್ದು, ಸರ್ಕಾರದ ವತಿಯಿಂದ ದೊಡ್ಡಕಟ್ಟೆ ಗ್ರಾಮದಲ್ಲಿ ಗ್ರಂಥಾಲಯ ಸ್ಥಾಪಿಸಬೇಕು. ಇದರಿಂದ ವಿದ್ಯಾರ್ಥಿಗಳಿಗೂ ಸಹ ತುಂಬಾ ಅನುಕೂಲವಾಗುತ್ತದೆ ಎಂದು ಅವರು ಗ್ರಂಥಾಲಯ ಇಲಾಖೆ ಮತ್ತು ಅಧಿಕಾರಿ ವರ್ಗದವರಿಗೆ ಮನವಿ ಮಾಡಿದ್ದಾರೆ.
------ಫೋಟೊ: 1 ಹೆಚ್ ಲಕ್ಷ್ಮೀಕಾಂತ್