ನೂತನವಾಗಿ ಕಟ್ಟಲಾಗಿದ್ದ ಸರ್ಕಾರಿ ಶಾಲೆಯ ಕಿಟಕಿ, ಸಿಸಿ ಕ್ಯಾಮೆರಾ, ಬಾಗಿಲು ಒಡೆದು ಕೊಠಡಿಯಲ್ಲಿ ಎಣ್ಣೆ ಪಾರ್ಟಿ

| Published : Aug 09 2024, 02:09 AM IST / Updated: Aug 09 2024, 05:45 AM IST

ನೂತನವಾಗಿ ಕಟ್ಟಲಾಗಿದ್ದ ಸರ್ಕಾರಿ ಶಾಲೆಯ ಕಿಟಕಿ, ಸಿಸಿ ಕ್ಯಾಮೆರಾ, ಬಾಗಿಲು ಒಡೆದು ಕೊಠಡಿಯಲ್ಲಿ ಎಣ್ಣೆ ಪಾರ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ನೂತನವಾಗಿ ಕಟ್ಟಲಾಗಿದ್ದ ಸರ್ಕಾರಿ ಶಾಲೆಯ ಕಿಟಕಿ, ಸಿಸಿ ಕ್ಯಾಮೆರಾ, ಬಾಗಿಲು ಒಡೆದು ಶಾಲೆ ಕೊಠಡಿಯಲ್ಲಿ ಎಣ್ಣೆ ಪಾರ್ಟಿ ಮಾಡಿ ದಾಂಧಲೆ ನಡೆಸಿ ಹೋಗಿರುವ ಘಟನೆ ದಾಸರಹಳ್ಳಿ ಕ್ಷೇತ್ರದ ಕ್ಷೇತ್ರದ ಮಲ್ಲಸಂದ್ರ ವಾರ್ಡ್‌ನ ರವೀಂದ್ರನಗರದಲ್ಲಿ ನಡೆದಿದೆ.

 ದಾಸರಹಳ್ಳಿ :  ನೂತನವಾಗಿ ಕಟ್ಟಡಲಾಗಿದ್ದ ಸರ್ಕಾರಿ ಶಾಲೆಯ ಕಿಟಕಿ, ಸಿಸಿ ಕ್ಯಾಮೆರಾ, ಬಾಗಿಲು ಒಡೆದು ಶಾಲೆ ಕೊಠಡಿಯಲ್ಲಿ ಎಣ್ಣೆ ಪಾರ್ಟಿ ಮಾಡಿ ದಾಂಧಲೆ ನಡೆಸಿ ಹೋಗಿರುವ ಘಟನೆ ದಾಸರಹಳ್ಳಿ ಕ್ಷೇತ್ರದ ಕ್ಷೇತ್ರದ ಮಲ್ಲಸಂದ್ರ ವಾರ್ಡ್‌ನ ರವೀಂದ್ರನಗರದಲ್ಲಿ ನಡೆದಿದೆ.

ಸರ್ಕಾರಿ ಪ್ರಾಥಮಿಕ ಪಾಠಶಾಲೆ ಇತ್ತೀಚೆಗಷ್ಟೇ ₹50 ಲಕ್ಷ  ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿತ್ತು. ಶಾಲೆಯ ಆವರಣಕ್ಕೆ ನುಗ್ಗಿರುವ ಕಿಡಿಗೇಡಿಗಳು ಎರಡು ಅಂತಸ್ತಿನ ಕೊಠಡಿಗಳ ಕಿಟಿಕಿ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ. ಸಿಸಿ ಕ್ಯಾಮೆರಾ ಒಡೆದು ಹಾಕಿದ್ದಾರೆ. ಕೊಠಡಿಯ ಬಾಗಿಲಿಗೆ ಹಾಕಿದ್ದ ಬೀಗ ಕಿತ್ತು ಹಾಕಿದ್ದಾರೆ. ಬಳಿಕ ಕಟ್ಟಡದ ಒಳಗೆ ನುಗ್ಗಿ ಎಣ್ಣೆ ಪಾರ್ಟಿ ಮಾಡಿ ಬಾಟಲ್‌ಗಳನ್ನು ಅಲ್ಲಿಯೇ ಬಿಸಾಡಿ ಹೋಗಿದ್ದಾರೆ. ಇಷ್ಟು ಸಾಲದಂತೆ ಶಾಲೆಯ ಶೌಚಾಲಯದ ಬಾಗಿಲನ್ನೂ ಮುರಿದಿದ್ದಾರೆ.ಗುರುವಾರ ಬೆಳಗ್ಗೆ ಶಾಲೆ ಪ್ರಾರಂಭವಾದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣವೇ ಶಾಲೆಯ ಸಿಬ್ಬಂದಿ ಶಾಸಕ ಎಸ್‌.ಮುನಿರಾಜು ಅವರ ಗಮನಕ್ಕೆ ತಂದಿದ್ದಾರೆ. ಮುನಿರಾಜು ಭೇಟಿ ನೀಡಿ ಶಾಲೆಗೆ ಕಿಟಕಿ ಗಾಜು ಒಡೆದಿರುವುದನ್ನು ನೋಡಿ ಸ್ಥಳೀಯ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಪೋಲಿಸರನ್ನು ಸ್ಥಳಕ್ಕೆ ಕರೆಸಿ ದುಷ್ಮರ್ಮಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಶಾಸಕ ಎಸ್.ಮುನಿರಾಜು ಬಳಿಕ ಮಾತನಾಡಿ, ಶಾಲೆಗೆ ನೂತನವಾಗಿ ಕಟ್ಟಡ ಕಟ್ಟಿಸಲಾಗಿತ್ತು. ಕಳೆದ ತಿಂಗಳಷ್ಟೇ ಶಾಲೆಯ ಹೊಸ ಕಟ್ಟಡವನ್ನು ಉದ್ಘಾಟಿಸಲಾಗಿತ್ತು. ಇತ್ತೀಚೆಗೆ ದುಷ್ಕರ್ಮಿಗಳು ಬಂದು ಶಾಲೆಯ ಕಟ್ಟಡದ ಕಿಟಕಿಯ ಗಾಜುಗಳನ್ನು ಒಡೆದು ಹಾಕಿದ್ದಾರೆ. ಸಿಸಿ ಕ್ಯಾಮೆರಾವನ್ನೂ ಒಡೆದು ಹೋಗಿದ್ದಾರೆ. ಶೌಚಾಲಯದ ಬಾಗಿಲುಗಳನ್ನು ಕಿತ್ತು ಹಾಕಿದ್ದಾರೆ. ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಎಂದು ಪೋಲಿಸರಿಗೆ ತಿಳಿಸಿದ್ದೇನೆ ಎಂದರು.

ಶಾಲೆಯ ಶಿಕ್ಶಕಿ ಗಿರಿಜಮ್ಮ ಮಾತನಾಡಿ, ಕ್ರಿಕೆಟ್ ಆಡಲು ಕೆಲವು ಹುಡುಗರ ತಂಡ ಬರುತ್ತಾರೆ. ಅವರಿಗೆ ಎಷ್ಟೋ ಬಾರಿ ಇಲ್ಲಿ ಆಟ ಆಡಲು ಬರಬೇಡಿ ಎಂದು ಮನವಿ ಮಾಡಿದ್ಧೇವೆ. ಅವರು ನಮ್ಮ ಮಾತನ್ನು ಕೇಳುತ್ತಿಲ್ಲ. ಯಾರೋ ಬಂದು ಶಾಲೆಯ ಕಿಟಕಿಯ ಗಾಜುಗಳನ್ನು ಒಡೆದು ಹಾಕಿದ್ದಾರೆ. ಅದ್ದರಿಂದ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರ ಗಮನಕ್ಕೆ ತಂದಿದ್ದೇವೆ. ಶಾಸಕ ಎಸ್‌.ಮುನಿರಾಜು ಅವರು ವೀಕ್ಷಣೆ ಮಾಡಿ ಸ್ಥಳೀಯ ಪೊಲೀಸರನ್ನು ಕರೆಸಿ ಪ್ರತಿನಿತ್ಯ ಬೀಟ್ ಹಾಕುವಂತೆ ಹೇಳಿದ್ದಾರೆ ಎಂದು ತಿಳಿಸಿದರು.