ಸಾರಾಂಶ
ಕಳೆದ ವರ್ಷಗಳಿಂದ ಲೋಕ ಕಲ್ಯಾಣಕ್ಕಾಗಿ ನಗರದಲ್ಲಿ ಹಿಂದೂ ಮಹಾಗಣಪತಿ ಉತ್ಸವ ಯಶಸ್ವಿಯಾಗಿ ನಡೆಯುತ್ತಿದ್ದು, ಗಣೇಶನ ಕೃಪೆಯನ್ನು ಪಡೆಯಲು ನಾವೆಲ್ಲರೂ ಭಕ್ತಿ, ಶ್ರದ್ದೆಯಿಂದ ಪೂಜಿಸುವುದಲ್ಲದೆ, ನಾಡಿನ ಕಲ್ಯಾಣಕ್ಕಾಗಿ ಶ್ರಮಿಸುವ ಸಂಕಲ್ಪವನ್ನು ಮಾಡಬೇಕೆಂದು ಖ್ಯಾತ ಜ್ಯೋತಿಷಿ, ಧಾರ್ಮಿಕ ಚಿಂತಕ ಡಾ. ಅನಂತರಾಮ್ ಗೌತಮ್ ತಿಳಿಸಿದರು.
ಕನ್ನಡಪ್ರಭವಾರ್ತೆ ಚಳ್ಳಕೆರೆ
ಕಳೆದ ವರ್ಷಗಳಿಂದ ಲೋಕ ಕಲ್ಯಾಣಕ್ಕಾಗಿ ನಗರದಲ್ಲಿ ಹಿಂದೂ ಮಹಾಗಣಪತಿ ಉತ್ಸವ ಯಶಸ್ವಿಯಾಗಿ ನಡೆಯುತ್ತಿದ್ದು, ಗಣೇಶನ ಕೃಪೆಯನ್ನು ಪಡೆಯಲು ನಾವೆಲ್ಲರೂ ಭಕ್ತಿ, ಶ್ರದ್ದೆಯಿಂದ ಪೂಜಿಸುವುದಲ್ಲದೆ, ನಾಡಿನ ಕಲ್ಯಾಣಕ್ಕಾಗಿ ಶ್ರಮಿಸುವ ಸಂಕಲ್ಪವನ್ನು ಮಾಡಬೇಕೆಂದು ಖ್ಯಾತ ಜ್ಯೋತಿಷಿ, ಧಾರ್ಮಿಕ ಚಿಂತಕ ಡಾ. ಅನಂತರಾಮ್ ಗೌತಮ್ ತಿಳಿಸಿದರು.ಅವರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಳಿ ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಏರ್ಪಡಿಸಿದ್ದ ಗಣಹೋಮ, ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೆರೆದಿದ್ದ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.
ಸಾಮಾನ್ಯವಾಗಿ ಎಲ್ಲೆಡೆ ಗಣೇಶ ಎಂದರೆ ಎಲ್ಲರಿಗೂ ಹೆಚ್ಚು ಭಕ್ತಿ. ನಮ್ಮ ಧಾರ್ಮಿಕ ಪದ್ಧತಿಗಳು ಸಹ ನಮ್ಮ ಒಳಿತಿಗಾಗಿದ್ದು, ಗಣೇಶನ ಉತ್ಸವ ನಮ್ಮೆಲ್ಲರಿಗೂ ಶಾಂತಿ, ನೆಮ್ಮದಿ ತರುವ ಕಾರ್ಯಕ್ರಮವಾಗಿದೆ. ಪ್ರತಿವರ್ಷ ಉತ್ಸವದಲ್ಲಿ ಭಾಗವಹಿಸುವವರ ಭಕ್ತಾಧಿಗಳ ಸಂಖ್ಯೆ ಹೆಚ್ಚುತ್ತಿದೆ. ವಿಶೇಷವಾಗಿ ಉತ್ಸವ ಸಮಿತಿಯ ಎಲ್ಲಾ ಪದಾಧಿಕಾರಿಗಳು ಪ್ರತಿವರ್ಷ ಗಣಹೋಮ ಪೂಜಾಕಾರ್ಯ ನಡೆಸುವ ಮೂಲಕ ನಾಡಿನ ಒಳಿತಿಗಾಗಿ ಪ್ರಾರ್ಥಿಸುತ್ತಾರೆ ಎಂದರು.ತಾಲೂಕು ಬ್ರಾಹ್ಮಣ ಸಂಘ ಮತ್ತು ವಿಪ್ರಗಾಯಿತ್ರಿ ಮಹಿಳಾ ಮಂಡಳಿ ವತಿಯಿಂದ ಪೂಜೆಯಲ್ಲಿ ಪಾಲ್ಗೊಂಡು ಭಜನೆ, ಹಾಡುಗಳನ್ನು ಹಾಡುವ ಮೂಲಕ ಗಣೇಶನನ್ನು ಪ್ರಾರ್ಥಿಸಲಾಗಿದೆ ಎಂದರು.
ವಿಶ್ವಹಿಂದೂಪರಿಷತ್ ತಾಲೂಕು ಅಧ್ಯಕ್ಷ ಡಿ.ಎನ್. ಮಂಜುನಾಥ, ವಿಪ್ರಗಾಯಿತ್ರಿ ಮಹಿಳಾ ಮಂಡಳಿ ಅಧ್ಯಕ್ಷ ಸೀತಾಲಕ್ಷ್ಮೀ ವಾದಿರಾಜ್, ಕಾರ್ಯದರ್ಶಿ ಮಧುಮತಿ, ಜಯಲಕ್ಷ್ಮೀ ಸುಬ್ಬಣ್ಣ, ಶೈಲಜಾ ಸುಬ್ರಮಣ್ಯ, ಪಂಕಜ ಗೌತಮ್, ಗೀತಾ, ಕಾರ್ಯದರ್ಶಿ ಎಂ. ಸತ್ಯನಾರಾಯಣರಾವ್, ನಿರ್ದೇಶಕರಾದ ಜೆ.ಎಸ್.ಶ್ರೀನಾಥ ಶರ್ಮ, ಎಸ್.ವೈ. ಮುರುಳಿಕೃಷ್ಣ, ಸಿ.ಎಸ್. ಗೋಪಿನಾಥ, ಜಿ. ಕೃಷ್ಣಮೂರ್ತಿ, ಪ್ರಹ್ಲಾದ್ ಮುಂತಾದವರು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.