ಸಾರಾಂಶ
ಸಮಾಜ ಕಲ್ಯಾಣ ಇಲಾಖೆಯಿಂದ ಅತ್ಯುತ್ತಮ ನಾಟಕ ಪ್ರಶಸ್ತಿ ಪಡೆದ ಅತ್ತಿ ಸಿಂಗಾರಿ, ಸೊಸಿ ಬಂಗಾರಿ ಎಂಬ ಕೌಟುಂಬಿಕ ನಾಟಕ ಆ.15ರಿಂದ ನಗರದ ಎನ್‌ಎಸ್‌ಎಫ್ ರಸ್ತೆಯಲ್ಲಿನ ಟೆಂಟ್‌ನಲ್ಲಿ ನಡೆಯಲಿದೆ ಎಂದು ನಾಟಕ ಕಂಪನಿ ಸಂಚಾಲಕ, ಕಥೆ ರಚನೆಕಾರ ಆನಂದ ಬೆಂಗಳೂರು ಹೇಳಿದರು.
ಕನ್ನಡಪ್ರಭ ವಾರ್ತೆ ಗೋಕಾಕ
ಸಮಾಜ ಕಲ್ಯಾಣ ಇಲಾಖೆಯಿಂದ ಅತ್ಯುತ್ತಮ ನಾಟಕ ಪ್ರಶಸ್ತಿ ಪಡೆದ ಅತ್ತಿ ಸಿಂಗಾರಿ, ಸೊಸಿ ಬಂಗಾರಿ ಎಂಬ ಕೌಟುಂಬಿಕ ನಾಟಕ ಆ.15ರಿಂದ ನಗರದ ಎನ್‌ಎಸ್‌ಎಫ್ ರಸ್ತೆಯಲ್ಲಿನ ಟೆಂಟ್‌ನಲ್ಲಿ ನಡೆಯಲಿದೆ ಎಂದು ನಾಟಕ ಕಂಪನಿ ಸಂಚಾಲಕ, ಕಥೆ ರಚನೆಕಾರ ಆನಂದ ಬೆಂಗಳೂರು ಹೇಳಿದರು.ನಗರದ ಎನ್‌ಎಸ್‌ಎಫ್ ರಸ್ತೆಯಲ್ಲಿ ನಿರ್ಮಿಸಿರುವ ಟೆಂಟ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಶ್ಲೀಲ ರಹಿತ ಮತ್ತು ಅನುಭವಿ ಹಿರಿಯ ಕಲಾವಿದರಿಂದ ಮಕ್ಕಳ ಶಿಕ್ಷಣದಲ್ಲಿ ಮನೆಯ ಮಹಿಳೆಯರ ಪಾತ್ರದ ಕುರಿತು ಒಳ್ಳೆಯ ಸಂದೇಶ ಒಳಗೊಂಡಿದೆ. ನಾಟಕದಲ್ಲಿ ಹಾಸ್ಯ ಪಾತ್ರಧಾರಿಗಳಾದ ಗೀತಾ ಬಿಜಾಪುರ, ಶಿವು ಮುಧೋಳ, ಮಹಾಂತೇಶ ಬ್ಯಾಡಗಿ ಅವರಿಂದ ಮನರಂಜನೆ ದೊರೆಯಲಿದೆ. ಅಳಿವಿನಂಚಿನಲ್ಲಿರುವ ರಂಗಭೂಮಿಯ ನಾಟಕ ಪ್ರದರ್ಶನ ಸುತ್ತಲಿನ ಜನತೆ ನೋಡಿ ಆನಂದಿಸುವಂತೆ ಮನವಿ ಮಾಡಿದರು.
ಆ.15ರಂದು ಸಂಜೆ 6ಗಂಟೆಗೆ ಅತ್ತಿ ಸಿಂಗಾರಿ ಸೊಸಿ ಬಂಗಾರಿ ಎಂಬ ನಾಟಕ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಡಿವೈಎಸ್‌ಪಿ ಡಿ.ಎಚ್. ಮುಲ್ಲಾ, ಪಿಎಸ್‌ಐ ಕೆ. ವಾಲಿಕಾರ, ಕಾಂಗ್ರೆಸ್ ಮುಖಂಡರಾದ ಅಶೋಕ ಪೂಜಾರಿ, ಚಂದ್ರಶೇಖರ ಕೊಣ್ಣೂರ, ವರ್ತಕ ಮಹಾಂತೇಶ ತಾಂವಶಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಹಿರಿಯ ಕಲಾವಿದರಾದ ಮುನ್ನಾ ಕುಕ್ಕನೂರ, ಅಂಬುಜಮ್ಮ ಬೆಂಗಳೂರು, ಮಹಾಂತೇಶ ಬ್ಯಾಡಗಿ, ಸಿದ್ದಯ್ಯ ನಂದಿಕೋಲಮಠ, ಪಾಪಣ್ಣ ಮುಧೋಳ ಸೇರಿದಂತೆ ಇತರೆ ಕಲಾವಿದರು ಇದ್ದರು.