ಟಿಎಪಿಸಿಎಂಎಸ್ ಚುನಾವಣೆ: ಅಂತಿಮ ಕಣದಲ್ಲಿ 25 ಅಭ್ಯರ್ಥಿಗಳು

| N/A | Published : Oct 22 2025, 01:03 AM IST

ಟಿಎಪಿಸಿಎಂಎಸ್ ಚುನಾವಣೆ: ಅಂತಿಮ ಕಣದಲ್ಲಿ 25 ಅಭ್ಯರ್ಥಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಆಡಳಿತ ಮಂಡಳಿ 14 ನಿರ್ದೇಶಕರ ಸ್ಥಾನಗಳಿಗೆ ಅ.26ರಂದು ನಡೆಯುವ ಚುನಾವಣೆ ಕಣದಿಂದ 5 ಜನ ನಾಮಪತ್ರ ಹಿಂಪಡೆದಿದ್ದು ಅಂತಿಮ ಕಣದಲ್ಲಿ 25 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ.

ಹರಪನಹಳ್ಳಿ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಆಡಳಿತ ಮಂಡಳಿ 14 ನಿರ್ದೇಶಕರ ಸ್ಥಾನಗಳಿಗೆ ಅ.26ರಂದು ನಡೆಯುವ ಚುನಾವಣೆ ಕಣದಿಂದ 5 ಜನ ನಾಮಪತ್ರ ಹಿಂಪಡೆದಿದ್ದು ಅಂತಿಮ ಕಣದಲ್ಲಿ 25 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ.

ಸೋಮವಾರ ಸಂಘದ ಕಚೇರಿಯಲ್ಲಿ ನಡೆದ ನಾಮಪತ್ರ ವಾಪಸ್‌ ಪಡೆಯುವ ಅಂತಿಮ ಪ್ರಕ್ರಿಯೆಯಲ್ಲಿ ಸಂಘದ 14 ನಿರ್ದೇಶಕ ಸ್ಥಾನಗಳ ಪೈಕಿ ಎ-ತರಗತಿಯಿಂದ 8 ಸ್ಥಾನಗಳಿಗೆ 12 ಬಿ-ತರಗತಿಯಿಂದ 6 ಸ್ಥಾನಗಳಿಗೆ 18 ಸೇರಿ ಒಟ್ಟು 30 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು.

ಬಿ-ತರಗತಿಯಿಂದ ಸಲ್ಲಿಸಿದ್ದ 18 ಜನರ ಪೈಕಿ 5 ಜನ ತಮ್ಮ ನಾಮಪತ್ರವನ್ನು ವಾಪಸ್‌ ಪಡೆದ ಹಿನ್ನೆಲೆಯಲ್ಲಿ ಎ ಮತ್ತು ಬಿ ಸೇರಿ ಒಟ್ಟು 25ಜನ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ ಎಂದು ಚುನಾವಣಾಧಿಕಾರಿ ಜಿ.ಎಸ್.ಸುರೇಂದ್ರ ತಿಳಿಸಿದ್ದಾರೆ.

ಎ ತರಗತಿಯಿಂದ ಸ್ಪರ್ದಿಸಿರುವ ಅಭ್ಯರ್ಥಿಗಳು:

ಬಿ.ಎಚ್. ಬಸವರಾಜಪ್ಪ- ಚಿರಸ್ತಹಳ್ಳಿ, ಎಸ್.ಪಿ.ಲಿಂಬ್ಯಾನಾಯ್ಕ- ಹಲುವಾಗಲು, ಟಿ.ಮಂಜಪ್ಪ- ಉಚ್ಚಂಗಿದುರ್ಗ, ಪೂಜಾರ ಹನುಮಂತಪ್ಪ- ನಂದಿಬೇವೂರು, ಬಿ.ವಾಗೀಶ- ನೀಲಗುಂದ, ವಿ.ಹನುಮಂತಪ್ಪ- ಮೈದೂರು, ಬಿ.ಮೂರ್ತಿನಾಯ್ಕ - ನಿಚ್ಚವ್ವನಹಳ್ಳಿ, ತಳವಾರ ಉಮಾಕಾಂತ- ತೆಲಗಿ, ಎಂ.ನಾಗರಾಜ- ಬೆಣ್ಣಿಹಳ್ಳಿ, ಸೋಮನಾಥ ಕೂಲಹಳ್ಳಿ, ಎ.ಶಾರದಮ್ಮ- ಹಗರಿಗಜಾಪುರ, ದಂಡಿನ ಹರೀಶ ಹರಪನಹಳ್ಳಿ- (ಬಿ90) ಸೇರಿ ಒಟ್ಟು 12 ಸೊಸೈಟಿಗಳಿಂದ ಡೆಲಿಗೇಷನ್ ಆಗಿ ಆಯ್ಕೆಯಾಗಿ ಬಂದ ಅಭ್ಯರ್ಥಿಗಳು.

ಬಿ ಕ್ಷೇತ್ರದಿಂದ ಸ್ಪರ್ದಿಸಿರುವ ಅಭ್ಯರ್ಥಿಗಳು:

ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಚಿಕ್ಕೇರಿ ಬಸಪ್ಪ, ಗಿಡ್ಡಳ್ಳಿ ನಾಗರಾಜ್, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಹಾರಕನಾಳು ಸಣ್ಣತಾಂಡದ ಎಲ್.ಬಿ.ಹಾಲೇಶನಾಯ್ಕ, ಎಚ್.ತಿಮ್ಮನಾಯ್ಕ್, ಮಹಿಳಾ ಮೀಸಲು ಕ್ಷೇತ್ರದಿಂದ ಬಿ.ಕೆ.ಶಹಜಾದ್, ಎ.ಹೈಯಾತ್, ಅಲಮರಸಿಕೇರಿ ಎಚ್.ನೇತ್ರಾವತಿ ಪರಶುರಾಮ್, ಉಪ್ಪಾರ ಹೂವಕ್ಕ, ಹಿಂದುಳಿದವರ್ಗ ಅ ಮೀಸಲು ಕ್ಷೇತ್ರದಿಂದ ಎಚ್.ಇಬ್ರಾಹಿಂ, ಮುಜುಬರ್ ರೆಹಮಾನ್, ಹಿಂದುಳಿದ ವರ್ಗ ಬ ಮೀಸಲು ಕ್ಷೇತ್ರದಿಂದ ಕೆ.ಮಹದೇವಪ್ಪ, ಎಚ್.ಎಂ.ಶಿವಮೂರ್ತೆಯ್ಯ, ಪಿ.ಪ್ರೇಮ್ ಕುಮಾರಗೌಡ ನಾಮಪತ್ರ ವಾಪಸ್ ಪಡೆದವರು:

ಬಿ-ತರಗತಿಯಿಂದ ನಾಮಪತ್ರ ಸಲ್ಲಿಸಿದ್ದ ಬಾಪೂಜಿ ನಗರದ ರಾಜುನಾಯ್ಕ್, ಹಾರಕನಾಳು ಡಿ.ಜಿ.ಪ್ರಕಾಶಗೌಡ, ಟಿ.ಅಹ್ಮದ್ ಹುಸೇನ್, ಗುಂಡಿ ಸುಜಾತ, ಹಾರಕನಾಳು ಸಣ್ಣತಾಂಡ ಮಂಜ್ಯಾನಾಯ್ಕ್ ಇವರು ತಮ್ಮ ನಾಮಪತ್ರ ವಾಪಸ್ ಪಡೆದಿದ್ದಾರೆ.

ಸಂಘದಲ್ಲಿ ಒಟ್ಟು 3264 ಷೇರುದಾರರ ಪೈಕಿ 725 ಷೇರುದಾರರು ಮಾತ್ರ ಮತದಾನಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಉಳಿದ 2539 ಷೇರುದಾರರನ್ನು ವ್ಯವಹಾರ ಮಾಡದೇ ಅಥವಾ ವಾರ್ಷಿಕ ಮಹಾಜನ್‌ ಸಭೆಗೆ ಕನಿಷ್ಠ ಎರಡು ಬಾರಿ ಹಾಜರಾಗದಿದ್ದಕ್ಕೆ ಮತಪಟ್ಟಿಯಿಂದ ಕೈ ಬಿಡಲಾಗಿದೆ.

ಕಾಂಗ್ರೆಸ್ ಪಕ್ಷದಲ್ಲಿಯೇ ಎರಡು ಗುಂಪುಗಳಾಗಿದ್ದು, ಮತಪಟ್ಟಿಯಿಂದ ಹೊರಗಿರುವ ತಮಗೆ ಬೇಕಾದ ಮತದಾರರ ಸಹಿ ಮಾಡಿಸಿಕೊಂಡು ಮತ ಚಲಾಯಿಸಲು ಅನಮತಿ ನೀಡುವಂತೆ ಧಾರವಾಡ ಹೈಕೋರ್ಟ್‌ ಮೊರೆ ಹೋಗಿದ್ದು, ಕೆಲವರಿಗೆ ಈಗಾಗಲೇ ಕೋರ್ಟ್‌ ಅನುಮತಿ ನೀಡಿದೆ. ಇನ್ನು ಕೆಲವರಿಗೆ ಮತದಾನದ ದಿನಾಂಕದೊಳಗೆ ಮತ ಚಲಾವಣೆಯ ಹಕ್ಕು ದೊರಕುವ ವಿಶ್ವಾಸವಿದೆ. ಅ.26ರಂದು ಮತದಾನ ನಡೆಯಲಿದೆ. ಅಷ್ಟರೊಳಗೆ ಮತದಾರರ ಸಂಖ್ಯೆ ಹೆಚ್ಚಳವಾಗುವುದು ಖಂಡಿತ.

Read more Articles on