ಸಾರಾಂಶ
ನವ್ಯ ಸಾಹಿತ್ಯದ ಕಾಲಘಟ್ಟದ ಪ್ರಮುಖ ಬರಹಗಾರರಲ್ಲಿ ತೇಜಸ್ವಿ ಪ್ರಮುಖರು.
ಕನ್ನಡಪ್ರಭ ವಾರ್ತೆ ಗಂಗಾವತಿ
ನವ್ಯ ಸಾಹಿತ್ಯದ ಕಾಲಘಟ್ಟದ ಪ್ರಮುಖ ಬರಹಗಾರರಲ್ಲಿ ತೇಜಸ್ವಿ ಪ್ರಮುಖರು. ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿ ಕನ್ನಡದ ಸಣ್ಣಕತೆಗಳ ಕ್ಷೀತಿಜವನ್ನು ವಿಸ್ತರಿಸಿದವರು ತೇಜಸ್ವಿ ಎಂದು ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ಸಂಯೋಜಕಿ ಡಾ. ಮುಮ್ತಾಜ್ ಬೇಗಂ ಹೇಳಿದರು.ನಗರದ ಶ್ರೀಕೊಲ್ಲಿನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದಲ್ಲಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ವಾರದ ಓದು ಕಾರ್ಯಕ್ರಮದಲ್ಲಿ ಮಾತನಾಡಿದರು.
ತೇಜಸ್ವಿ ಅವರ ಕತೆಗಳನ್ನು ಓದುವುದೇ ಒಂದು ಸೊಗಸು. ತೆಳು ಹಾಸ್ಯ ತೇಜಸ್ವಿಯವರ ಗದ್ಯದ ಪ್ರಮುಖ ಗುಣ. ಅದು ಅವರ ಕತೆಯಲ್ಲಿಯೂ ಪ್ರಮುಖವಾಗಿ ಕಾಣುತ್ತದೆ. ಅಲ್ಲದೇ ಮೌಢ್ಯತೆ, ಸಾಮಾಜಿಕ ಮೌಲ್ಯ, ಸೌಹಾರ್ದತೆ, ಸಂವಹನ, ಸಂಪರ್ಕ ಮಾಧ್ಯಮಗಳ ಬಳಕೆ ಮತ್ತು ಬಿಕ್ಕಟ್ಟುಗಳ ಬಗ್ಗೆ ಕತೆಯಲ್ಲಿ ಹೆಣೆಯಲಾಗಿದೆ ಎಂದರು.ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ದ್ವಿತೀಯ ಸೆಮಿಸ್ಟರ್ ವಿದ್ಯಾರ್ಥಿನಿ ಸುಮಾ ಹೊರಪೇಟೆ ಪೂರ್ಣಚಂದ್ರ ತೇಜಸ್ವಿಯವರ ಪರಿಚಯ ಹಾಗೂ ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಕುರಿತು ವಿಚಾರ ಮಂಡಿಸಿದರು.
ಕಾರ್ಯಕ್ರಮದ ಸಂಯೋಜಕ ಡಾ. ಬಸವರಾಜ ಗೌಡನಬಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಜಗದೇವಿ ಕಲಶೆಟ್ಟಿ ಆಗಮಿಸಿದ್ದರು. ವೆಂಕಟೇಶ್ ರೆಡ್ಡಿ ನಿರೂಪಿಸಿ, ಭೀಮಪ್ಪ ವಂದಿಸಿದರು. ಆರ್ಯವೈಶ್ಯ ಸಮಾಜದಿಂದ ನವವೃಂದಾವನಗಡ್ಡೆಗೆ ಪಾದಯಾತ್ರೆ:ಗಂಗಾವತಿ ನಗರದ ಹಿರೇಜಂತಕಲ್ ವಿರುಪಾಪುರ ಆರ್ಯವೈಶ್ಯ ಸಮಾಜದವರು ಗಂಗಾವತಿಯಿಂದ ಆನೆಗೊಂದಿಯ ನವವೃಂದಾವನಗಡ್ಡೆಗೆ ಪಾದಯಾತ್ರೆ ಕೈಗೊಂಡರು.ಆನೆಗುಂದಿಯ ತುಂಗಭದ್ರಾ ನಡುಗಡ್ಡೆಯಲ್ಲಿರುವ ನವ ವೃಂದಾವನ ಕ್ಷೇತ್ರಕ್ಕೆ ತೆರಳಿ ವಿಶೇಷ ಪೂಜೆ, 150ಕ್ಕೂ ಹೆಚ್ಚು ಸಮಾಜ ಬಾಂಧವರು ಮಹಿಳಾ ಮಂಡಳಿಯ ಸದಸ್ಯರು ಭಜನೆ ಸೇರಿದಂತೆ ವಿವಿಧ ಧಆರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.ನವ ವೃಂದಾವನ ಯತಿವರ್ಯರಿಗೆ ನರಸಿಂಹ ಆಚಾರ್, ವಿಜಯೇಂದ್ರ ಆಚಾರ್, ಆನಂದ ಆಚಾರ್ ಇವರ ನೇತೃತ್ವದಲ್ಲಿ ನವ ವೃಂದಾವನ ಒಂಬತ್ತು ಯತಿವರ್ಯರಿಗೆ ಮಹಾಪಂಚಾಮೃತಾಭಿಷೇಕ ನೆರವೇರಿಸಲಾಯಿತು.ಗುರು ಭೀಮ್ ಭಟ್ಜ ಜೋಶಿ, ದರೋಜಿ ನಾಗರಾಜ ಶ್ರೇಷ್ಟಿ, ಎನ್. ಗಂಗಾಧರ, ಜಿ.ಆರ್. ಸತ್ಯನಾರಾಯಣ, ಹಣವಾಳ ಚಂದ್ರಶೇಖರ, ಲಿಂಗಪ್ಪ ಜನಾದ್ರಿ, ಆನೆಗೊಂದಿ ಗೋಪಾಲ ಶ್ರೇಷ್ಟಿ, ದಮ್ಮೂರು ಸುರೇಶ, ದಮ್ಮೂರ ರಾಜಕುಮಾರ, ದರೋಜಿ ವೆಂಕಟೇಶ, ದರೋಜಿ ಮಲ್ಲಿಕಾರ್ಜುನ, ಈಶ್ವರ ಶ್ರೇಷ್ಟಿ, ಹೊಸಳ್ಳಿ ಬಸವರಾಜ, ರಾಘವೇಂದ್ರ ಬನ್ನಿಗೋಳ, ಬದ್ರಿ ಆನೆಗುಂದಿ, ಸೌದ್ರಿ ನಾಗರಾಜ, ಜಗದೀಶ ಶ್ರೇಷ್ಟಿ ಸೇರಿದಂತೆ ನವ ಬೃಂದಾವನ ಭಜನಾ ಮಂಡಳಿಯ ಅಧ್ಯಕ್ಷ ದರೋಜಿ ನರಸಿಂಹ ಶ್ರೇಷ್ಟಿ ಮತ್ತು ಭಜನಾ ಮಂಡಳಿಯ ಸದಸ್ಯರು ಹಾಗೂ ಮಹಿಳಾ ಮಂಡಳಿಯ ಅಧ್ಯಕ್ಷೆ ದಮ್ಮೂರು ರುಕ್ಮಿಣಿ, ಸದಸ್ಯರು ಭಾಗವಹಿಸಿದ್ದರು.