ಏತನೀರಾವರಿ ಯೋಜನೆಗೆ ಮರು ಚಾಲನೆ: ಡಾ.ಟಿ.ಬಿ.ಜಯಚಂದ್ರಗೌಡಗೆರೆ ಹೋಬಳಿಯ ಹೊಸೂರು ವ್ಯಾಪ್ತಿಯಲ್ಲಿ ಹತ್ತಾರು ಗ್ರಾಮಗಳ ರೈತರಿಗೆ ಅನುಕೂಲವಾಗುವ ಏತ ನೀರಾವರಿ ಯೋಜನೆ ಕಳೆದ 4 ದಶಕಗಳಿಂದ ಸ್ಥಗಿತಗೊಂಡಿದ್ದು, ಈ ಯೋಜನೆಗೆ ಮರು ಜೀವ ನೀಡುವ ಉದ್ದೇಶದಿಂದ ಸುವರ್ಣಮುಖಿ ನದಿ ಹರಿಯುವ ಹಳ್ಳಕ್ಕೆ ಬ್ಯಾರೇಜ್ ನಿರ್ಮಾಣ ಮಾಡುವ ಸಂಕಲ್ಪ ಮಾಡಿದ್ದೇನೆ. ಪ್ರಸ್ತುತ ಬರುವಂತಹ ಬಜೆಟ್ ನಲ್ಲಿ ಈ ಕಾಮಗಾರಿಯ ಅನುಮೋದನೆ ಪಡೆದು ಶೀಘ್ರದಲ್ಲಿಯೇ ಕಾಮಗಾರಿ ನಡೆಸಲಿದ್ದೇವೆ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಡಾ.ಟಿ.ಬಿ. ಜಯಚಂದ್ರ ಹೇಳಿದರು.