ಶಂಕರಪುರ: ರೋಟರಿ ಸಮುದಾಯದಳ ಜಿಲ್ಲಾ ಸಮ್ಮೇಳನ ಸಂಪನ್ನಶಿರ್ವ ರೋಟರಿಯ ಸಂಸ್ಥಾಪಕರು, ಬಹುಮುಖಿ ಪ್ರತಿಭಾ ಸಂಪನ್ನರಾದ ದಿ.ಪಾಂಗಾಳ ವಿಠಲ್ ಶೆಣೈ ಜನ್ಮ ಶತಮಾನೋತ್ಸವ ಅಂಗವಾಗಿ ಶಿರ್ವ ರೋಟರಿ ಕ್ಲಬ್, ಪಾದೂರು ರೋಟರಿ ಸಮುದಾಯದಳದ ನೇತೃತ್ವ ಹಾಗೂ ರೋಟರಿ ಶಂಕರಪುರ ಸಹಕಾರದಲ್ಲಿ ರೋಟರಿ ಅ.ರಾ.ಜಿಲ್ಲೆ ೩೧೮೨ ಇದರ ರೋಟರಿ ಸಮುದಾಯದಳ ಜಿಲ್ಲಾ ಸಮ್ಮೇಳನ ಶಂಕರಪುರ ಸೈಂಟ್ ಜೋನ್ಸ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.