ಬೈಲೂರು: ಬಸ್ ತಂಗುದಾಣ ಉದ್ಘಾಟನೆಬೈಲೂರು ಕೆಳಪೇಟೆಯಲ್ಲಿ ಶ್ರೀಮತಿ ಜಲಜ ಮತ್ತು ಶ್ರೀ ಗೋವಿಂದ ವಾಗ್ಳೆ ಸ್ಮರಣಾರ್ಥ ಅವರ ಪುತ್ರರಾದ ಉಡುಪಿ ಗೀತಾಂಜಲಿ ಸಮೂಹ ಉದ್ಯಮ ಸಂಸ್ಥೆಗಳ ಪಾಲುದಾರರಾದ ರಾಮಕೃಷ್ಣ ವಾಗ್ಳೆ, ಲಕ್ಷ್ಮಣ ವಾಗ್ಳೆ, ರಮೇಶ್ ವಾಗ್ಳೆ , ಹರೀಶ್ ವಾಗ್ಳೆ, ಸಂತೋಷ್ ವಾಗ್ಳೆ ಅವರು ನಿರ್ಮಿಸಿರುವ ಪ್ರಯಾಣಿಕರ ತಂಗುದಾಣವನ್ನು ಶಾಸಕ ವಿ. ಸುನೀಲ್ ಕುಮಾರ್ ಲೋಕಾರ್ಪಣೆಗೊಳಿಸಿದರು.