ಕನಸಾಗಿ ಉಳಿದ ಬಬ್ಬುಕುದ್ರು ಪ್ರವಾಸಿ ತಾಣ ಅಭಿವೃದ್ಧಿ ಕೂಗುಈ ಕುದ್ರುವಿನಿಂದ ಕುಂದಾಪುರದ ಕಡೆ ಇರುವ ಸುಮಾರು 500 ಮೀಟರ್ ಅಗಲದ ನದಿಯ ಸುಮಾರು 1500 ಮೀ. ವಿಸ್ತಾರದ ಪ್ರದೇಶ ಸಂಪೂರ್ಣ ಹೂಳು ತುಂಬಿ ಹೋಗಿದೆ. ಭರತ (ನೀರು ಉಕ್ಕೇರುವ) ಸಂದರ್ಭದಲ್ಲಿ ನದಿಯಲ್ಲಿ ಒಂದಡಿಯಷ್ಟು ನೀರು ಕಂಡರೂ, ಇಳಿತದ ಸಮಯದಲ್ಲಿ ಈ ಪ್ರದೇಶ ಮರುಭೂಮಿಯ ಓಯಸಿಸ್ನಂತೆ ಕಾಣುತ್ತದೆ. ಲಕ್ಷ ಲೋಡ್ ಮರಳು ತೆಗೆದರೂ ಇನ್ನಷ್ಟು ಇದೆ, ಎಂಬಷ್ಟು ಮರಳು ದಿಬ್ಬಗಳಿದ್ದು, ಅದರ ಮೇಲೆ ಗಿಡಗಳು ಬೆಳೆದು ಕಾಡುಗಳಾಗಿವೆ.