ಕೊಲ್ಲೂರು ಮೂಕಾಂಬಿಕೆಗೆ ವಜ್ರದ ಕಿರೀಟ ಅರ್ಪಿಸಿದ ಇಳಯರಾಜಪಂಚವಾದ್ಯಗಳೊಂದಿಗೆ, ಕೊಲ್ಲೂರಿನ ಓಲಗ ಮಂಟಪದಿಂದ ರಥಬೀದಿಯಲ್ಲಿ ಪೂರ್ಣಕುಂಭ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಕಿರೀಟ ಹಾಗೂ ಚಿನ್ನಾಭರಣಗಳನ್ನು ತಂದು, ಕ್ಷೇತ್ರದ ಋತ್ವಿಜರು ಪೂಜಾ ವಿಧಿ ವಿಧಾನಗಳನ್ನು ಪೂರೈಸಿ, ದೇವರಿಗೆ ಕಿರೀಟ ಹಾಗೂ ಆಭರಣಗಳನ್ನು ಒಪ್ಪಿಸಲಾಯಿತು. ಈ ವೇಳೆ ದೇವಸ್ಥಾನದ ವತಿಯಿಂದ ಇಳಯರಾಜ ಅವರನ್ನು ಗೌರವಿಸಲಾಯಿತು.