ಹಂಪಿಯಲ್ಲಿ ಸಂಭ್ರಮದ ಫಲಪೂಜಾ ಮಹೋತ್ಸವಹಂಪಿಯ ಶ್ರೀ ವಿರೂಪಾಕ್ಷೇಶ್ವರ ಹಾಗೂ ಶ್ರೀ ಪಂಪಾಂಬಿಕೆ ದೇವಿ ಫಲಪೂಜಾ (ನಿಶ್ಚಿತಾರ್ಥ) ಮಹೋತ್ಸವ ಸಂಭ್ರಮದಿಂದ ಮಂಗಳವಾರ ಜರುಗಿತು. ಫಲಪೂಜಾ ಮಹೋತ್ಸವದ ನಿಮಿತ್ತ ಶ್ರೀ ವಿರೂಪಾಕ್ಷೇಶ್ವರ ವಿಗ್ರಹಕ್ಕೆ ಅಭಿಷೇಕ ಮಾಡಲಾಯಿತು. ಬಳಿಕ ವಿಜಯನಗರ ಅರಸರು ನೀಡಿದ ಸ್ವರ್ಣ ಖಚಿತ ಕಿರೀಟ ಧಾರಣೆ ಮಾಡಲಾಯಿತು.