ಟೋಲ್ ವಿರೋಧಿಸಿ ಗ್ರಾಮಸ್ಥರ ಪ್ರತಿಭಟನೆಕನ್ನಡಪ್ರಭ ವಾರ್ತೆ ಕೊಲ್ಹಾರ: ತಾಲೂಕಿನ ಮುಳವಾಡದ ಬಳಿಯ ಟೋಲ್ ಗುರುವಾರ ತಡರಾತ್ರಿ ಆರಂಭವಾದ ಹಿನ್ನೆಲೆಯಲ್ಲಿ ತಾಲೂಕಿನ ಸುತ್ತಮುತ್ತಲಿನ ಗ್ರಾಮದ ರೈತರು ಟೋಲ್ ನಾಕಾ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಟೋಲ್ ನಾಕಾಕ್ಕೆ ಸಂಬಂಧಪಟ್ಟ ಕೊಲ್ಹಾರ, ಬಬಲೇಶ್ವರ ತಾಲೂಕಿನ ಗ್ರಾಮಗಳ ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಮಕ್ಷಮದಲ್ಲಿ ಸದರಿ ಟೋಲ್ ನಾಕಾವನ್ನು ಪ್ರಾರಂಭಿಸಬೇಕು. ಪ್ರಾರಂಭಿಸುವ ಮುಂಚೆ ರಸ್ತೆ ಶುಲ್ಕ ಕೇಂದ್ರಕ್ಕೆ ಸಂಬಂಧಪಡುವ ಗ್ರಾಮಗಳ ಗ್ರಾಮಸ್ಥರನ್ನು ಕರೆಸಿ ಸಭೆ ನಡೆಸಿ ಅವರ ಕುಂದು ಕೊರತೆಗಳನ್ನು ಗಮನದಲ್ಲಿಟ್ಟುಕೊಂಡು ಟೋಲ್ ಪ್ರಾರಂಭಿಸಬೇಕು.