ಸಮೈರಾ ಕೈಗೂಡಿತು ''''''''ಗಗನ'''''''' ಕನಸುಕನ್ನಡಪ್ರಭ ವಾರ್ತೆ ವಿಜಯಪುರ ಆಕೆ ಆಗಿನ್ನೂ ಬಾಲಕಿ, ಉತ್ಸವದಲ್ಲಿ ಹೆಲಿಕಾಪ್ಟರ್ ಟೂರ್ ನಡೆಸಲಾಗುತ್ತಿತ್ತು. ಈ ವೇಳೆ ಆ ಪುಟ್ಟ ಪೋರಿಯ ತಂದೆ ಕುಟುಂಬ ಸಮೇತ ಹೆಲಿಕಾಪ್ಟರ್ ಹತ್ತಿದ್ದರು. ಆಗಲೇ ತಾನು ಸಹ ಪೈಲಟ್ ಆಗಬೇಕು ಎಂದು ಕನಸು ಕಂಡಿದ್ದ ಆ 8 ವರ್ಷದ ಬಾಲಕಿ ಮುಂದೆ ಕೇವಲ 10 ವರ್ಷಕ್ಕೆ ಅಂದುಕೊಂಡಿದ್ದ ಕನಸನ್ನು ನನಸು ಮಾಡಿಕೊಂಡಿದ್ದಾಳೆ. ಇದೀಗ ಆಗಸದಲ್ಲಿ ಹಾರುವ ಮೂಲಕ ಆ ಬಾಲಕಿ ಭಾರತದ ಅತ್ಯಂತ ಕಿರಿಯ ಪೈಲಟ್ ಎಂದು ಹೆಸರು ಮಾಡಿದ್ದು, ಜಿಲ್ಲೆ, ರಾಜ್ಯದ ಕೀರ್ತಿ ಪತಾಕೆಯನ್ನು ರಾಷ್ಟ್ರ ಮಟ್ಟದಲ್ಲಿ ಹಾರಿಸಿದ್ದಾಳೆ.