ಪೊಲೀಸರ ಬೆನ್ನೆಲುಬಾಗುವಲ್ಲಿ ಗೃಹರಕ್ಷಕರು ಯಶಸ್ವಿಕನ್ನಡಪ್ರಭ ವಾರ್ತೆ ಇಂಡಿ: ಗೃಹರಕ್ಷಕ ದಳದ ಸೇವೆ ಅಮೂಲ್ಯವಾದದ್ದು. ಪೊಲೀಸರಿಗೆ ಬೆನ್ನೆಲುಬಾಗಿ ಸೇವೆ ಸಲ್ಲಿಸುವಲ್ಲಿ ಗೃಹ ರಕ್ಷಕದಳ ಯಶಸ್ವಿಯಾಗಿದೆ ಎಂದು ಇಂಡಿ ಡಿವೈಎಸ್ಪಿ ಎಚ್. ಜಗದೀಶ ಹೇಳಿದರು. ಪಟ್ಟಣದ ಡಿವೈಎಸ್ಪಿ ಕಾರ್ಯಾಲಯದ ಸಭಾ ಭವನದಲ್ಲಿ ಜಿಲ್ಲಾ ಗೃಹರಕ್ಷಕ ದಳ ಹಮ್ಮಿಕೊಂಡ ಅಖಿಲ ಭಾರತ ಗೃಹರಕ್ಷಕ ದಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜೀವ ರಕ್ಷಣೆ, ಆಸ್ತಿ ರಕ್ಷಣೆ ಹಾಗೂ ಕಾನೂನು ಸುವ್ಯವಸ್ಥೆ ಪಾಲಿಸಲು ಗೃಹ ರಕ್ಷಕ ದಳದ ಕೊಡುಗೆ ಮಹತ್ತರವಾಗಿದೆ. ಜಿಲ್ಲೆಯಲ್ಲಿ ಎಲ್ಲ ಘಟಕದ ಗೃಹ ರಕ್ಷಕರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.