ಅಧಿವೇಶನದಲ್ಲಿ ಮಾರ್ಧನಿಸಲಿ ತೊಗರಿ ಪರಿಹಾರದ ಕೂಗುಕನ್ನಡಪ್ರಭ ವಾರ್ತೆ ವಿಜಯಪುರ ಬಂದರೆ ಬಂಪರ್, ಹೋದರೆ ಪಾಪರ್ ಎಂಬಂತಾಗಿರುವ ರೈತರ ಬಾಳು, ಈ ಬಾರಿ ತೊಗರಿ ಬೆಳೆಯ ನಷ್ಟಕ್ಕೆ ರೈತರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಉತ್ತರ ಕರ್ನಾಟಕದಾದ್ಯಂತ ಮುಂಗಾರು ಹಂಗಾಮಿನಲ್ಲಿ ಭರ್ಜರಿಯಾಗಿ ತೊಗರಿ ಬಿತ್ತನೆ ಮಾಡಿದ ರೈತರ ಜಮೀನಿನಲ್ಲಿ ಆಳೆತ್ತರಕ್ಕೆ ಬೆಳೆದ ತೊಗರಿ ಗಿಡಗಳಲ್ಲಿ ಫಸಲು ಇಲ್ಲದೇ ಅನ್ನದಾತರು ಕಂಗೆಟ್ಟು ಹೋಗಿದ್ದಾರೆ. ಸರ್ಕಾರದಿಂದ ವಿತರಿಸಿದ ತೊಗರಿ ಬೀಜಗಳಲ್ಲೇ ಲೋಪವಿದೆ ಎಂದು ಅನ್ನದಾತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.