ಸಮಾಜಿಕ ಕಾರ್ಯಗಳಿಂದ ವಿಶ್ವಮಾನವರಾಗಿ ಬದುಕಿಕನ್ನಡಪ್ರಭ ವಾರ್ತೆ ಇಂಡಿ ಶಿಕ್ಷಣದಿಂದ ಹೊಸ ಬದುಕು ಕಟ್ಟಿಕೊಳ್ಳಲು ಸಾಧ್ಯವಿದ. ಶಿಕ್ಷಣದ ಜೊತೆ ಸಂಸ್ಕಾರವೂ ಮುಖ್ಯವಾಗಿದ್ದು, ಶಿಕ್ಷಕರು ಪಾಠ ಬೋಧನೆಯ ಜೊತೆಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿಕೊಡಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ತಾಲೂಕಿನ ಬರಗುಡಿ ಗ್ರಾಮದ ಹಜರತ ನಾಸೀರಜಂಗಸಾಹೇಬ ದರ್ಗಾ ಹಾಗೂ ಶೈಕ್ಷಣಿಕ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ನೂತನ ಕೋಣೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.