ಕನಕದಾಸರು ಸಾಮಾಜಿಕ ಬದಲಾವಣೆಯ ಪ್ರತೀಕಕನ್ನಡಪ್ರಭ ವಾರ್ತೆ ನಾಲತವಾಡ ಕನಕದಾಸರು ಕೇವಲ ಕವಿಯಲ್ಲ, ದಾರ್ಶನಿಕ, ಸಾಮಾಜಿಕ ಬದಲಾವಣೆಯ ಪ್ರತೀಕ ಮತ್ತು ಭಕ್ತಿಯ ಅದ್ವಿತೀಯ ಸ್ವರೂಪವಾಗಿದ್ದಾರೆ ಎಂದು ವೀರೇಶ್ವರ ಪಿಯು ಕಾಲೇಜಿನ ಪ್ರಚಾರ್ಯ ಡಾ.ಡಿ.ಆರ್.ಮಳಖೇಡ ಹೇಳಿದರು. ಪಟ್ಟಣದ ಕನಕದಾಸ ವೃತ್ತದಲ್ಲಿ ನಡೆದ ಕನಕ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಮತ್ತು ದಾಸ ಪರಂಪರೆಯಲ್ಲಿ ತನ್ನದೇ ಆದ ಅನನ್ಯ ಸ್ಥಾನ ಹೊಂದಿರುವ ಕನಕದಾಸರು ಕೇವಲ ಕವಿಯಲ್ಲ, ಆಧ್ಯಾತ್ಮಿಕ ತತ್ವದ ಬೆಳಕನ್ನು ಹರಿಸಿದ ದಾರ್ಶನಿಕರು.