ವುಮನ್ ಮೀಡಿಯಾ ಕ್ಲಬ್ ಸಮಾಜಕ್ಕೆ ಕೊಡುಗೆ ನೀಡಲಿಕನ್ನಡಪ್ರಭ ವಾರ್ತೆ ವಿಜಯಪುರ ವುಮನ್ ಮೀಡಿಯಾ ಕ್ಲಬ್ ಮಹಿಳೆಯರಿಗೆ ಮಾತ್ರವಲ್ಲ, ಮಕ್ಕಳಿಗೂ ಶಿಸ್ತಿನ ಹಾದಿಯಲ್ಲಿ ಪ್ರೇರಣೆ ನೀಡಲು ಕಾರ್ಯನಿರ್ವಹಿಸಬೇಕು. ದೌರ್ಜನ್ಯದ ಬಗ್ಗೆ ಅರಿವು ಮೂಡಿಸಲು, ಸ್ವಚ್ಛತಾ ಅಭಿಯಾನ, ಪರಿಸರ ಸಂರಕ್ಷಣೆಯ ಕಾರ್ಯಗಳು, ಹಾಗೂ ಶಿಷ್ಟಾಚಾರದ ಕುರಿತ ಕಾರ್ಯಾಗಾರ ಆಯೋಜಿಸಬೇಕು ಎಂದು ಕೆನಡಾದ ಟೊರೊಂಟೋದ ಬಿ.ವಿ ನಾಗ್ ಕಮ್ಯುನಿಕೇಶನ್ಸ್ ಅಧ್ಯಕ್ಷ ಬಿ.ವಿ.ನಾಗರಾಜು ಹೇಳಿದರು.