ಸಿಎಂ ಸೇರಿ ನಾಯಕರೆಲ್ಲ ರೈತರ ಕ್ಷಮೆ ಕೇಳಬೇಕುಕನ್ನಡಪ್ರಭ ವಾರ್ತೆ ವಿಜಯಪುರ ರಾಜ್ಯದಲ್ಲಿ ರೈತರ, ಮಠಮಾನ್ಯಗಳ, ಸರ್ಕಾರಿ ಆಸ್ತಿಗಳೆಲ್ಲವನ್ನೂ ವಕ್ಫ್ಗೆ ದಾಖಲು ಮಾಡಬೇಕು ಎಂದು ಕಾಂಗ್ರೆಸ್ ಸರ್ಕಾರ ನೋಟಿಸ್ ನೀಡಿತ್ತು. ರೈತರು, ಮಠಾಧೀಶರು ಹಾಗೂ ಬಿಜೆಪಿ ನಾಯಕರು ಹೋರಾಟಕ್ಕಿಳಿದ ತಕ್ಷಣ ಉಪಚುನಾವಣೆಯಲ್ಲಿ ಹಿನ್ನಡೆಯಾಗುತ್ತದೆ ಎಂದು ಹೆದರಿ ನೋಟಿಸ್ ವಾಪಸ್ ಪಡೆದಿದ್ದಾರೆ. 1974ರ ಗೆಜೆಟ್ ಅನ್ನು ರದ್ದುಮಾಡಬೇಕು, ಮುಖ್ಯಮಂತ್ರಿಯಾದಿಯಾಗಿ ಕಾಂಗ್ರೆಸ್ ನಾಯಕರೆಲ್ಲ ರೈತ ಸಮುದಾಯದ ಕ್ಷಮೆ ಕೇಳಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕುಚಬಾಳ ಆಗ್ರಹಿಸಿದರು.