ಹಳೇಯ ಫೆನಲ್‌ನಿಂದ ಅದ್ಧೂರಿ ನಾಮಪತ್ರ ಸಲ್ಲಿಕೆಕನ್ನಡಪ್ರಭ ವಾರ್ತೆ ತಾಳಿಕೋಟೆ ಪಟ್ಟಣದ ತಾಳಿಕೋಟಿ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಮಂಡಳಿಯ ಆಯ್ಕೆ ಚುನಾವಣೆ ತೀವ್ರ ತುರುಸಿನಿಂದ ಕೂಡಿದ್ದು, ಶನಿವಾರ ಹಳೆ ಫೆನಲ್‌ನ 13 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಈ ಮೂಲಕ ಒಟ್ಟು ೩೭ ಕ್ಕೂ ಅಧಿಕ ನಾಮಪತ್ರ ಸಲ್ಲಿಕೆಯಾಗಿವೆ. ಹಳೆಯ ಫೆನಲ್ ಸದಸ್ಯರು ಪಟ್ಟಣದಲ್ಲಿ ಭರ್ಜರಿ ರೋಡ ಶೋ ನಡೆಸುವ ಮೂಲಕ ಬ್ಯಾಂಕ್ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.