ದೇಶ,ವಿದೇಶದಲ್ಲೂ ರಾಜ್ಯೋತ್ಸವ ಸಂಭ್ರಮ: ಎಂ.ಬಿ.ಪಾಟೀಲಕನ್ನಡಪ್ರಭ ವಾರ್ತೆ ವಿಜಯಪುರ: ರಾಜ್ಯದಲ್ಲಿ, ರಾಷ್ಟ್ರದಲ್ಲಿ ಹಾಗೂ ವಿದೇಶದಲ್ಲೂ ಇಂದು 69ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ, ಶ್ರದ್ಧೆ, ಭಕ್ತಿಯಿಂದ ಆಚರಿಸಲಾಗುತ್ತಿದೆ. ರಾಜ್ಯ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ನಮ್ಮ ಹಿರಿಯರು ಕರ್ನಾಟಕದ ಏಕಿಕರಣಕ್ಕಾಗಿ ಕೊಡುಗೆ ಕೊಟ್ಟಿದ್ದಾರೆ, ಅವರನ್ನು ಸ್ಮರಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಕೈಗಾರಿಕಾ ಹಾಗೂ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.