ಸದಾಶಿವ ವರದಿಯಿಂದ 99 ಸಮುದಾಯಗಳಿಗೆ ಅನ್ಯಾಯಕನ್ನಡಪ್ರಭ ವಾರ್ತೆ ವಿಜಯಪುರ ಈ ಹಿಂದೆ ತಯಾರಿಸಲಾದ ಸದಾಶಿವ ಆಯೋಗದ ವರದಿಯನ್ನೇ ಯಥಾವತ್ತಾಗಿ ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿದೆ. ಇದರಿಂದ ಲಂಬಾಣಿ, ಭೋವಿ, ಒಡ್ಡರ, ಕೊರಮ, ಕೊರಚ ಸೇರಿದಂತೆ 99 ಸಮುದಾಯಗಳಿಗೆ ಅನ್ಯಾಯವಾಗಲಿದೆ. ಹಾಗಾಗಿ ಇದನ್ನು ಇಲ್ಲಿಗೆ ಕೈಬಿಡಬೇಕು ಎಂದು ಸೇವಾಲಾಲ ಸೇನೆ ಜಿಲ್ಲಾಧ್ಯಕ್ಷ ಸುರೇಶ ಚವ್ಹಾಣ ಆಗ್ರಹಿಸಿದರು.