ಪುಟ...4ಕ್ಕೆ ಕೃಷಿ ಹೊಂಡಕ್ಕೆ ಬಿದ್ದು ತಾಯಿ, ಇಬ್ಬರು ಮಕ್ಕಳ ಸಾವುದೇವರಹಿಪ್ಪರಗಿ: ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಮಕ್ಕಳು ಸೇರಿದಂತೆ ತಾಯಿ ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಹರನಾಳ ಗ್ರಾಮದ ಬಸಪ್ಪ ತಿಪ್ಪಣ್ಣ ನಾಯ್ಕೋಡಿ ಎಂಬುವರ ಜಮೀನಿನಲ್ಲಿ ಶುಕ್ರವಾರ ಸಂಭವಿಸಿದೆ. ಹರನಾಳ ಗ್ರಾಮದ ರಾಮಪ್ಪ ನಾಯ್ಕೋಡಿ ಮಗಳಾದ ಯಾಳವಾರದ ಗೀತಾ ಶ್ರೀಶೈಲ ಬಡಗಿ (30), ಇವರ ಮಕ್ಕಳಾದ ಶರತ್ ಶ್ರೀಶೈಲ ಬಡಗಿ (6) ಹಾಗೂ ಶ್ರವಣ ಶ್ರೀಶೈಲ ಬಡಗಿ(4) ಮೃತಪಟ್ಟವರು.