ಪಿಎಸ್‌ಐ ತಿಪ್ಪಾರೆಡ್ಡಿ ಮೇಲೆ ನಡಹಳ್ಳಿ ಕೆಂಡಕನ್ನಡಪ್ರಭ ವಾರ್ತೆ ವಿಜಯಪುರಗೋವಿನ ಕೆಚ್ಚಲು ಕತ್ತರಿಸಿದ್ದನ್ನು ಖಂಡಿಸಿ ಬಿಜೆಪಿ ರೈತ ಮೋರ್ಚಾದ 15ಜನ ಮುಖಂಡರು ಮುದ್ದೇಬಿಹಾಳದಲ್ಲಿ ಶಾಸಕ ಸಿ.ಎಸ್.ನಾಡಗೌಡರ ಮನೆ ಮುಂದೆ ರಂಗೋಲಿ ಹಾಕಿ, ಶಾಂತಿಯುತವಾಗಿ ಪ್ರತಿಭಟಿಸಿ ಅವರಿಗೆ ಮನವಿ ಕೊಡಲು ಮುಂದಾಗಿದ್ದರು. ಈ ವೇಳೆ ಪಿಎಸ್‌ಐ ತಿಪ್ಪಾರೆಡ್ಡಿ ಅವರು ಹೋರಾಟಗಾರರ ಎದೆ ಮೇಲಿನ ಅಂಗಿ ಹಿಡಿದು, ಹಲ್ಲೆ ಮಾಡಲು ಮುಂದಾಗಿದ್ದರು ಎಂದು ಮಾಜಿ ಶಾಸಕ, ಬಿಜೆಪಿ ರೈತಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಆರೋಪಿಸಿದರು.