ಪ್ರಚಾರವಿಲ್ಲದೆ ಸರ್ಕಾರಿ ಶಾಲೆ ಪ್ರಗತಿ ಕುಂಠಿತ

| Published : May 14 2025, 12:02 AM IST

ಸಾರಾಂಶ

ಸರ್ಕಾರಿ ಶಾಲೆಯಲ್ಲಿ ಉಚಿತವಾಗಿ ಓದಿದವರು ಶಾಲೆಗಳನ್ನು ಮರೆಯದೆ ತಮ್ಮ ಕೈಲಾದ ಸಹಕಾರ ನೀಡಬೇಕೆಂಬ ಉದ್ದೇಶದಿಂದ "ನಮ್ಮ ಶಾಲೆ ನಮ್ಮ ಜವಾಬ್ದಾರಿ " ಎಂಬ ವಿನೂತನ ಯೋಜನೆ ಆರಂಭಿಸಲಾಗಿದೆ ಎಂದು ಹಳೇಬೀಡಿನ ಕೆ.ಪಿ.ಎಸ್ ಉಪ ಪ್ರಾಂಶುಪಾಲ ಮುಳ್ಳಯ್ಯ ತಿಳಿಸಿದರು. ಸರ್ಕಾರಿ ಶಾಲೆಗಳಲ್ಲಿ ಪ್ರತಿದಿನ ವಿದ್ಯಾರ್ಥಿ ಊಟದ ವ್ಯವಸ್ಥೆ, ಉಚಿತ ಆರೋಗ್ಯ ತಪಾಸಣೆ, ಬಿಸಿಹಾಲು, ಮೊಟ್ಟೆ-ಬಾಳೆಹಣ್ಣುಗಳನ್ನು ನೀಡುವುದು ಆಧುನಿಕ ಅಡಿಗೆ ಮತ್ತು ದಾಸ್ತಾನು ಕೊಠಡಿಗಳು ಇವೆ ಎಂದರು.

ಕನ್ನಡಪ್ರಭ ವಾರ್ತೆ ಹಳೇಬೀಡು

ಸರ್ಕಾರಿ ಶಾಲೆಯಲ್ಲಿ ಉಚಿತವಾಗಿ ಓದಿದವರು ಶಾಲೆಗಳನ್ನು ಮರೆಯದೆ ತಮ್ಮ ಕೈಲಾದ ಸಹಕಾರ ನೀಡಬೇಕೆಂಬ ಉದ್ದೇಶದಿಂದ "ನಮ್ಮ ಶಾಲೆ ನಮ್ಮ ಜವಾಬ್ದಾರಿ " ಎಂಬ ವಿನೂತನ ಯೋಜನೆ ಆರಂಭಿಸಲಾಗಿದೆ ಎಂದು ಹಳೇಬೀಡಿನ ಕೆ.ಪಿ.ಎಸ್ ಉಪ ಪ್ರಾಂಶುಪಾಲ ಮುಳ್ಳಯ್ಯ ತಿಳಿಸಿದರು.ಹಳೇಬೀಡಿನ ಕೆ.ಪಿ.ಎಸ್ ಶಾಲೆಯ ಆವರಣದಲ್ಲಿ ನಮ್ಮ ಶಾಲೆ ನಮ್ಮ ಜವಾಬ್ದಾರಿ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಅವರು ಸರ್ಕಾರಿ ಶಾಲೆಗಳನ್ನು ನಮ್ಮ ಶಾಲೆ ಅನ್ನದೇ ನನ್ನ ಶಾಲೆ ಅನ್ನುವ ಅಭ್ಯಾಸವಿದ್ದರೆ ಆಗ ಶಾಲೆ ಅಭಿವೃದ್ಧಿ ಕಾಣುತ್ತದೆ. ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವುದಕ್ಕೆ ಪ್ರಚಾರದ ಕೊರತೆ ಎದ್ದು ಕಾಣುತ್ತಿದೆ. ಹಾಗಾಗಿ ಸರ್ಕಾರಗಳು ಇಂಥ ಯೋಜನೆಗಳು ಹಾಕಿಕೊಂಡು ಸ್ಥಳೀಯ ಕಾರ್ಯಕರ್ತ ಸಹಕಾರದಿಂದ ಕೆಲಸ ಮಾಡಿದರೆ ಉತ್ತಮ ಫಲಿತಾಂಶ ನೀಡಿದರೆ ಜನರಲ್ಲಿ ಆಸಕ್ತಿ ಉಂಟಾಗಿ ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯವಾಗುತ್ತದೆ. ಖಾಸಗಿ ಶಾಲೆಯರು ನಿತ್ಯವೂ ಪ್ರಚಾರದಲ್ಲೇ ಇದ್ದು ಜಾಹೀರಾತು, ನಿತ್ಯ ಪತ್ರಿಕೆಗಳಲ್ಲಿ ತಮ್ಮ ಫಲಿತಾಂಶ ನೀಡುವುದು ಸರ್ವೇಸಾಮಾನ್ಯಗಿದೆ. ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಸಹ ಒಳ್ಳೆಯ, ಉತ್ತಮ ಫಲಿತಾಂಶ ನೀಡಿದ್ದು ಅದರ ಜೊತೆಗೆ ಉತ್ತಮವಾದ ಕಟ್ಟಡಗಳು, ಸಮವಸ್ತ್ರ, ಶಿಸ್ತು ಹಾಗೂ ಸಮಯ ಪಾಲನೆ ಹೆಚ್ಚಾಗಿ ಸರ್ಕಾರಿ ಶಾಲೆಯಲ್ಲಿ ಕಂಡುಬರುತ್ತದೆ ಎಂದು ತಿಳಿಸಿದರು.

ತಾಲೂಕಿನ ಅಕ್ಷರ ದಾಸೋಹ ಅಧಿಕಾರಿ ಧನಂಜಯ ಮಾತನಾಡುತ್ತ, ಸರ್ಕಾರಿ ಶಾಲೆಗಳಲ್ಲಿ ಪ್ರತಿದಿನ ವಿದ್ಯಾರ್ಥಿ ಊಟದ ವ್ಯವಸ್ಥೆ, ಉಚಿತ ಆರೋಗ್ಯ ತಪಾಸಣೆ, ಬಿಸಿಹಾಲು, ಮೊಟ್ಟೆ-ಬಾಳೆಹಣ್ಣುಗಳನ್ನು ನೀಡುವುದು ಆಧುನಿಕ ಅಡಿಗೆ ಮತ್ತು ದಾಸ್ತಾನು ಕೊಠಡಿಗಳು, ಶಾಲಾ ಪೌಷ್ಟಿಕ ವನಗಳು ಇವೆಲ್ಲವೂ ಸರ್ಕಾರ ಶಾಲೆಯಲ್ಲಿ ಸಿಗುವಿದು ಒಟ್ಟಾರೆ ಯಶಸ್ವಿಯಾಗಿ ಒಟ್ಟಿಗೆ ಕೆಲಸವನ್ನು ಮಾಡಿದರೆ ಸರ್ಕಾರ ಶಾಲೆಗಳು ಉಳಿಯುವುದು ಖಂಡಿತ ಎಂದು ತಿಳಿಸಿದರು.

ಕೆಪಿಎಸ್ ಶಾಲಾ ಅಭಿವೃದ್ಧಿ ಅಧ್ಯಕ್ಷ ಬಿ.ಎಸ್ ಸೋಮಶೇಖರ್ ಮಾತನಾಡುತ್ತಾ, ಹಾಸನ ಜಿಲ್ಲೆಗೆ ಹಳೇಬೀಡು ಕೆಪಿಎಸ್ ಶಾಲೆ ಅತ್ಯುತ್ತಮ ಆಧುನಿಕತೆಯ ನೂತನ ಕಟ್ಟಡ ಹೊಂದಿರುವ ಏಕೈಕ ಶಾಲೆಯಾಗಿದೆ. ಈ ಶಾಲೆಯಲ್ಲಿ ೧ರಿಂದ ೧೨ ತರಗತಿವರೆಗೂ ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ೨೪- ೨೫ನೇ ಸಾಲಿನಲ್ಲಿ ಉತ್ತಮ ಫಲಿತಾಂಶ ಹೊಂದಿದ್ದು, ಅದರಲ್ಲಿ ಆಂಗ್ಲ ಮಾಧ್ಯಮ ೧೦೦% ಫಲಿತಾಂಶ, ಪಿಯುಸಿಯಲ್ಲಿ ವಿಜ್ಞಾನ, ಕಲಾ ಮತ್ತು ವಾಣಿಜ್ಯ ವಿಭಾಗ ಅತ್ಯುತ್ತಮ ಫಲಿತಾಂಶ ನೀಡುವ ಜಿಲ್ಲೆಗೆ ಉತ್ತಮ ಶಾಲೆಯಾಗಿ ಅದರಲ್ಲಿ ಶಾಲೆಯ ವಿಸ್ತೀರ್ಣ ೧೫ ಎಕರೆ ವಿಸ್ತೀರ್ಣ ಹೊಂದಿದೆ. ಈ ಶಾಲೆ ಅಭಿವೃದ್ಧಿಯನ್ನು ಸ್ಥಳೀಯ ಪೋಷಕರು ಸಹಕಾರ ನೀಡಬೇಕೆಂದು ತಿಳಿಸಿದರು.ಅಭಿವೃದ್ಧಿ ಸಮಿತಿಯ ಸದಸ್ಯ ನಿವೃತ್ತಿ ಶಿಕ್ಷಕ ಬಸವರಾಜು ಮಾತನಾಡುತ್ತಾ, ಸರ್ಕಾರಿ ಶಾಲೆಯಲ್ಲಿ ಅತ್ಯುತ್ತಮ ಬೋಧಕ ವರ್ಗದವರು ಹಾಗೂ ತರಬೇತಿ ನೀಡಿದ ಶಿಕ್ಷಕರು ಹೊಂದಿರುತ್ತಾರೆ ಹಾಗೂ ಖಾಸಗಿ ಶಾಲೆಯಲ್ಲಿ ಯಾವ ತರಬೇತಿ ಇಲ್ಲದ ಶಿಕ್ಷಕರು ಪಾಠ ಪ್ರವಚನ ನೀಡುತ್ತಾರೆ. ಸರ್ಕಾರಿ ಶಾಲೆಯಲ್ಲಿ ಹೆಚ್ಚು ಅವರು ತನ್ನದೇ ಆದ ಮಕ್ಕಳನ್ನು ನಿಯಮದಲ್ಲೇ ಬೆಳೆಸುತ್ತಾರೆ. ಸರ್ಕಾರಿ ಶಾಲೆಯಲ್ಲಿ ಉತ್ತಮ ಬೆಳವಣಿಗೆ ಮತ್ತು ಆರೋಗ್ಯಕರವಾದ ಬೆಳವಣಿಗೆಯಿಂದ ಮಕ್ಕಳು ಬೆಳೆದು ತಮ್ಮ ಜೀವನದಲ್ಲಿ ಒಳ್ಳೆಯ ಸ್ಥಾನಕ್ಕೆ ಹೋಗುತ್ತಾರೆ ಎಂದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಪಿಎಸ್ ಪ್ರಾಂಶುಪಾಲ ವಿನುತಾ ಮಾತನಾಡುತ್ತಾ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ವಿದ್ಯಾಭ್ಯಾಸದ ಹೆಚ್ಚು ಗಮನ ನೀಡುವುದು ಪೋಷಕ ವರ್ಗದವರು ಹಾಗೂ ಅಭಿವೃದ್ಧಿ ಸಮಿತಿಯ ಸದಸ್ಯರು ಹೆಚ್ಚಾಗಿ ಗಮನ ನೀಡುತ್ತಾರೆ. ಹಳೇಬೀಡಿನ ಶಾಲಾ ಅಭಿವೃದ್ಧಿ ಸಮಿತಿ ಒಳ್ಳೆ ಕೆಲಸವನ್ನು ಮಾಡುತ್ತ ಶಾಲೆಯ ಅಭಿವೃದ್ಧಿಯ ಯಶಸ್ವಿ ಕಾಣಲು ಕಾರಣಕರ್ತರಾಗಿದ್ದಾರೆ. ಈ ಶಾಲೆಯಲ್ಲಿ ಉತ್ತಮವಾದ ನೂತನ ಕೊಠಡಿಗಳು ಹೊಂದಿದೆ. ಆಧುನಿಕ ಲೈಟು, ಫ್ಯಾನು ಒಳ್ಳೆಯ ಕ್ರೀಡಾಂಗಣ ಹೊಂದಿದೆ ಶಾಲೆಯನ್ನು ಉಳಿಸಿ ಊರನ್ನು ಬೆಳೆಸಿ ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಮುಖ್ಯ ಶಿಕ್ಷಕಿ ಕಲಾವತಿ, ತಾ.ಪ್ರ.ಸ. ಅಧ್ಯಕ್ಷ ಹಳೇಬೀಡು ರಘುನಾಥ್, ಮುಖ್ಯಶಿಕ್ಷಕ ಯೋಗೀಶ್, ಸಿಆರ್‌ಪಿ ಸೋಮಣ್ಣ, ನಾರಾಯಣ, ಗ್ರಾಮ ಪಂಚಾಯತ್‌ ಕಾರ್ಯದರ್ಶಿ ಶೈಲಜಾ ಎಲ್ಲಾ ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿಗಳು, ಪೋಷಕ ವರ್ಗದವರು ಮತ್ತು ಮಕ್ಕಳು ಹಾಜರಿದ್ದರು.