ಪ್ರಾಣಿ, ಪಕ್ಷಿಗಳ ದಾಹ ನೀಗಿಸಲು ಕೈಜೋಡಿಸಿ: ಶಾಯಿಬಾಬದಿನದಿಂದ ದಿನಕ್ಕೆ ಜಾಗತಿಕ ತಾಪ ಹೆಚ್ಚಾಗುತ್ತಿರುವುದರಿಂದ ಹಳ್ಳ-ಕೊಳ್ಳ, ಕೆರೆಗಳಲ್ಲಿ ಜಲ ಸಂಪತ್ತು ಬತ್ತಿ ಹೋಗುತ್ತಿದ್ದು, ಪ್ರಾಣಿ ಪಕ್ಷಿ ಸಂಕುಲ ನೀರಿಲ್ಲದೆ ಸಂಕಷ್ಟಕ್ಕೊಳಗಾಗುತ್ತಿವೆ. ಇಂಥ ಸಂದರ್ಭದಲ್ಲಿ ಪ್ರತಿಯೊಬ್ಬರು ತಮ್ಮ ಮನೆಯ ಮೇಲ್ಛಾವಣಿಗಳ ಮೇಲೆ ತೆರೆದ ಬಟ್ಟಲುಗಳಲ್ಲಿ ನೀರು ನೀಡಿ ಪ್ರಾಣಿ, ಪಕ್ಷಿಗಳ ದಾಹ ನೀಗಿಸಿ ಎಂದು ಯುವ ಸಂಶೋಧಕ ಶಾಯಿಬಾಬ ಅಣಬಿ ಹೇಳಿದರು.