ಬಾಲಕಬುದ್ಧೀ... ನಿನ್ನಂದ ಆಗಲ್ಲ ಅಂತಿದ್ದಾರೆ ಜನರು!‘ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಗೆದ್ದಂತೆ ಬೀಗುತ್ತಿರುವ ಕಾಂಗ್ರೆಸ್ಗೆ ವಾಸ್ತವತೆಯ ಅರಿವಿಲ್ಲ. ಅವರು ಗೆದ್ದಿರುವುದು 100ಕ್ಕೆ 99 ಅಲ್ಲ, 543ಕ್ಕೆ 99.. ಆದರೂ ತಾವೇ ಗೆದ್ದಂತೆ ವರ್ತಿಸುತ್ತಿದ್ದಾರೆ’ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೋಮವಾರ ಲೋಕಸಭೆಯಲ್ಲಿ ಮಾಡಿದ ಭಾಷಣವನ್ನು ‘ಬಾಲಕ ಬುದ್ಧಿ’ಗೆ ಹೋಲಿಸಿ ವ್ಯಂಗ್ಯಭರಿತ ತೀಕ್ಷ್ಣ ಎದಿರೇಟು ನೀಡಿದ್ದಾರೆ. ಅಲ್ಲದೆ, ಈ ಬಾಲಕ ಬುದ್ಧಿಯ ವ್ಯಕ್ತಿಗೆ ದೇವರು ಸದ್ಬುದ್ಧಿ ಕೊಡಲಿ ಎಂದು ತಮಾಷೆ ಮಾಡಿದ್ದಾರೆ.