1998-2000ನೇ ಸಾಲಿನ ಕನ್ನಡ ಎಂ.ಎ.ವಿದ್ಯಾರ್ಥಿಗಳ ‘ಮೊಳಕೆ’, ‘ಗರಿಕೆ ಹುಲ್ಲು’

| N/A | Published : May 17 2025, 02:05 AM IST / Updated: May 17 2025, 07:50 AM IST

1998-2000ನೇ ಸಾಲಿನ ಕನ್ನಡ ಎಂ.ಎ.ವಿದ್ಯಾರ್ಥಿಗಳ ‘ಮೊಳಕೆ’, ‘ಗರಿಕೆ ಹುಲ್ಲು’
Share this Article
  • FB
  • TW
  • Linkdin
  • Email

ಸಾರಾಂಶ

25ನೇ ವರ್ಷದಲ್ಲಿ ಒಟ್ಟಿಗೆ ಸೇರುವ ಹೊತ್ತಿಗೆ ಸರಿಯಾಗಿ ಏನಾದರೂ ವಿಭಿನ್ನವಾಗಿ ಮಾಡಬೇಕು ಎಂದು ಆಲೋಚಿಸಿ, ಕಥೆ ಹಾಗೂ ಲೇಖನಗಳ ಸಂಕಲನಗಳನ್ನು ಹೊರತಂದಿದ್ದಾರೆ.  

  ಮೈಸೂರು : ಮೊಳಕೆ-ಕಥಾ ಸಂಕಲನ ಹಾಗೂ ಗರಿಕೆ ಹುಲ್ಲು- ಲೇಖನಗಳ ಸಂಕಲನವನ್ನು 1998-2000ನೇ ಸಾಲಿನಲ್ಲಿ ಮೈಸೂರು ವಿವಿ ಮಾನಸ ಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎಂ.ಎ.ಓದಿದ ವಿದ್ಯಾರ್ಥಿಗಳು ಹೊರತಂದಿದ್ದಾರೆ.

‘ಮೊಳಕೆ’ ಕಥಾ ಸಂಕಲನವನ್ನು ಕೃಷ್ಣ ಜನಮನ ಸಂಪಾದಿಸಿದ್ದಾರೆ. ಇದರಲ್ಲಿ ಮಹೇಶ್‌ ಅಗಸರಹಳ್ಳಿ ಅವರ ಅವ್ವ, ಕೋವಿಡ, ಆ.. ಒಂದು ಮಳೆ, ಜೆ.ಕೆ.ರಶ್ಮಿ ಅವರ ನಿನ್ನ ಜೊತೆ ನನ್ನ ಕತೆ, ಡಾ.ಎಚ್.ಎಸ್.ಅನುಪಮಾ ಅವರ ಗಟ್ಟಿಮೇಳ, ಹೊಂದಾಣಿಕೆ, ನೆಲೆ, ಕೃಷ್ಣ ಜನಮನ ಅವರ ಜೀವ, ಸ್ಯತ್ತ, ಮಾರಿಗುಡಿ, ಡಾ.ಟಿ.ಕೆ. ಕೆಂಪೇಗೌಡ ಅವರ ಮನಸ್ಸು ಮಾತನಾಡಿದಾಗ, ನಿರಾಸೆ- ಕಥೆಗಳಿವೆ.

‘ಗರಿಕೆ ಹುಲ್ಲು’ ಲೇಖನ ಸಂಕಲನವನ್ನು ಮಹೇಶ್‌ ಅಗಸರಹಳ್ಳಿ ಸಂಪಾದಿಸಿದ್ದಾರೆ ಇಲ್ಲಿ ಕೃಷ್ಣ ಜನಮನ ಅವರ ಒಲುವೇ ನಮ್ಮ ಬದುಕು, ಪ್ರಜಾಪ್ರಭುತ್ವ ಮತ್ತು ಸ್ಥಿತಿಗತಿ, ಸಮಾನತೆಯ ಕನಸು ಕಾಣುತ್ತಾ, ಮೌಢ್ಯವಿರೋಧಿ ಚಿಂತನೆ, ಡಾ.ಟಿ.ಕೆ. ಕೆಂಪೇಗೌಡ ಅವರ ಕನ್ನಡ ಸಾಹಿತ್ಯದಲ್ಲಿ ಧರ್ಮ ಮತ್ತು ಪ್ರಜಾಪ್ರಭುತ್ವದ ಚಿಂತನೆ,

ಕನ್ನಡ ಸಾಹಿತ್ಯ ಭಾಷೆಯ ಶಾಸ್ತ್ರೀಯ ಸ್ಥಾನಮಾನದ ಕಿರೀಟ, ಕನ್ನಡ ಬೋಧನೆ ಸಾಧ್ಯತೆ ಮತ್ತು ಸವಾಲುಗಳು, ಡಾ. ಶಿವಕುಮಾರ್‌ ಅವರ ಸಮಾನತೆಯೊಳಗೊಂದು ಸಮಾನತೆ, ಮದ್ದೂರು ದೊರೆಸ್ವಾಮಿ ಅವರ ಸಿದ್ದಪ್ಪಾಜಿಯ ಚಿಕ್ಕಲ್ಲೂರು ಜಾತ್ರೆಯೋ! ಭಾರತೀಯ ಸಾಂಸ್ಕೃತಿಕ ಪರಂಪರೆಯೋ, ನಾಗರಾಜ್‌ ತಲಕಾಡು ಅವರ ವೈದಿಕ ಧರ್ಮದ ಸುಳಿಯಿಂದ ಪಾರಾಗುವ ಅನಿವಾರ್ಯತೆಃ ಬಗೆ ಹೇಗೆ?, ವಚನ ಚಳವಳಿಯ ಸತ್ಯಾಸತ್ಯತೆ ಲೇಖನಗಳು ಇವೆ.

ಡಾ.ಎಚ್.ಆನಂದಕುಮಾರ್‌ ಅವರ ಸಾ.ರಾ.ಅಬೂಬಕರ್‌ ಅವರ ಚಂದ್ರಗಿರಿಯ ತೀರದಲ್ಲಿ- ಒಂದು ವಿಶ್ಲೇಷಣೆ, ಒಂದು ಮೌಲಿಕ ಕೃತಿಯಾಗಿ ಬಸವಣ್ಣನವರ ದೇವರು, ಡಾ.ಎಚ್.ಎಸ್. ಅನುಪಮಾ ಅವರ ವಚನ ಪರಂಪರೆಯಲ್ಲಿ ಮಹಿಳೆಯರ ಪ್ರಾಮುಖ್ಯತೆ, ಸಮಾನತೆ ಸಾರುವ ಬುದ್ಧ ಭಾರತ ಕಾವ್ಯ, ಅಧಿಕಾರ ಅಧೀನತೆಗಳನ್ನು ಕುರಿತು ಮಿಲೆಟ್‌ ವಿಚಾರಗಳು, ಭಾರತ ಸಿಂಧು ರಶ್ಮಿ- ಪೂರ್ವಾಪರ ಕಾಂಡ, ಜೈನ ಧರ್ಮ ಮತ್ತು ಅಹಿಂಸೆ, ಪ್ರಾಚೀನ ಮತ್ತು ಆಧುನಿಕ ಪರಿಕಲ್ಪನೆಗಳು, ಮಹೇಶ್‌ ಅಗಸರಹಳ್ಳಿ ಅವರ ಸರಳತೆ ಮತ್ತು ಸೋಮಾರಿತನ, ಚಂದನವನದತ್ತ, ಹರಿವ ನೀರಿನಂತಿರಲಿ ಜೀವನ, ನಮ್ಮ ಆರೋಗ್ಯ, ನಮ್ಮ ಆಹಾರ, ಆಯಸ್ಸು ಮತ್ತು ಸಂಸ್ಕೃತಿ, ಗಣತಂತ್ರ ವ್ಯವಸ್ಥೆಯ ಚುನಾವಣೆಗಳು ರಣತಂತ್ರವಾಗಿ ಬದಲಾಗುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ...! ಲೇಖನಗಳಿವೆ.

ಇಲ್ಲಿರುವ ಲೇಖಕರೆಲ್ಲಾ ಸುಮಾರು 24 ವರ್ಷಗಳ ನಂತರ ಪರಸ್ಪರ ಸಂಪರ್ಕಕ್ಕೆ ಬಂದವರು. ಬೇರೆ ಬೇರೆ ವೃತ್ತಿಯಲ್ಲಿ ತೊಡಗಿಸಿಕೊಂಡವರು. ಹೀಗಿದ್ದರೂ ಸಾಹಿತ್ಯದ ನಂಟು ಬಿಟ್ಟಿಲ್ಲ. ಕೆಲವರು ಸಂಪರ್ಕಕ್ಕೆ ಬಂದ ನಂತರ ಕಥೆ, ಲೇಖನ ಸಿದ್ಧಪಡಿಸಿದ್ದಾರೆ. 25ನೇ ವರ್ಷದಲ್ಲಿ ಒಟ್ಟಿಗೆ ಸೇರುವ ಹೊತ್ತಿಗೆ ಸರಿಯಾಗಿ ಏನಾದರೂ ವಿಭಿನ್ನವಾಗಿ ಮಾಡಬೇಕು ಎಂದು ಆಲೋಚಿಸಿ, ಕಥೆ ಹಾಗೂ ಲೇಖನಗಳ ಸಂಕಲನಗಳನ್ನು ಹೊರತಂದಿದ್ದಾರೆ. ಇದರಿಂದಾಗಿ ಇದೊಂದು ವಿಶಿಷ್ಟವಾದ ಪ್ರಯತ್ನ ಎನ್ನಬಹುದು. ಲೇಖನಗಳು ವಿಷಯ ವೈವಿಧ್ಯತೆಯಿಂದಲೂ ಕೂಡಿವೆ. ಕನ್ನಡ ಸಾಹಿತ್ಯ ಓದುವ ವಿದ್ಯಾರ್ಥಿಗಳಿಗೆ ಈ ಎರಡು ಕೃತಿಗಳು ‘ಕೈಮರ’ದಂತೆ ‘ದಾರಿದೀಪ’ ವಾಗಿವೆ ಎನ್ನಬಹುದು.

ಎರಡೂ ಕೃತಿಗಳನ್ನು ಅನನ್ಯ ಪ್ರಕಾಶನ ಪ್ರಕಟಿಸಿದ್ದು, ಆಸಕ್ತರು ಸಂಸ್ಕೃತಿ ಸುಬ್ರಹ್ಮಣ್ಯ, ಮೊ.94480 37762 ಸಂಪರ್ಕಿಸಬಹುದು.

Read more Articles on