ಪಾಕಿಸ್ತಾನ ಪ್ರಧಾನಿ ಷರೀಫ್, ವಿಶ್ವಸಂಸ್ಥೆಯ ವೇದೆಕೆಯಲ್ಲಿ ಕೂಡ ‘ಭಾರತದ ವಿರುದ್ಧದ ಯುದ್ಧದಲ್ಲಿ ಗೆದ್ದಿದ್ದೇ ನಾವು’ ಎಂದಿದ್ದಾರೆ. ‘ಯುದ್ಧ ನಿಲ್ಲಿಸಿದ್ದು ಅಮೆರಿಕ ಅಧ್ಯಕ್ಷ ಟ್ರಂಪ್. ಅದಕ್ಕೆಂದೇ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಗೆ ಶಿಫಾರಸು ಮಾಡಿದ್ದೆವು’ ಎಂದು ಸಮರ್ಥಿಸಿಕೊಂಡಿದ್ದಾರೆ.
ಅಮೆರಿಕದ ತೆರಿಗೆಯಿಂದಾಗಿ ಭಾರತದ ಮೇಲೆ ಒತ್ತಡ ಹೆಚ್ಚಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಧ್ಯಕ್ಷ ಪುಟಿನ್ಗೆ ನೇರವಾಗಿ ಕರೆ ಮಾಡಿ ಉಕ್ರೇನ್ ಜತೆಗಿನ ಯುದ್ಧದಲ್ಲಿ ಅವರ ಮುಂದಿನ ನಡೆಯೇನೆಂದು ವಿಚಾರಿಸಿದ್ದಾರೆ ಎಂದು ನ್ಯಾಟೋ ಮುಖ್ಯಸ್ಥ ಮಾರ್ಕ್ ರುಟ್ಟೆ ಹೇಳಿದ್ದಾರೆ.
ಒಂದು ಕಡೆ ಅಮೆರಿಕವು ವಿಶೇಷ ಕೌಶಲ್ಯ ಹೊಂದಿರುವ ವಿದೇಶಿಗರಿಗೆ ನೀಡಲಾಗುತ್ತಿರುವ ಎಚ್1ಬಿ ವೀಸಾಗೆ ಕಡಿವಾಣ ಹಾಕಲು ಮುಂದಾಗಿದ್ದರೆ, ಇನ್ನೊಂದು ಕಡೆ ಚೀನಾ ಅಂಥ ನೌಕರರನ್ನು ತನ್ನತ್ತ ಸೆಳೆಯಲು ಸಜ್ಜಾಗಿ ನಿಂತಿದೆ. ಇದಕ್ಕೆಂದೇ ‘ಕೆ ವೀಸಾ’ ಪರಿಚಯಿಸಲು ಮುಂದಾಗಿದೆ.
ಖಲಿಸ್ತಾನಿ ಉಗ್ರಗಾಮಿ ನಾಯಕ ಗುರುಪತ್ವಂತ್ ಸಿಂಗ್ ಪನ್ನು ಆಪ್ತನಾದ, ಖಲಿಸ್ತಾನಿ ಉಗ್ರ ಇಂದರ್ಜೀತ್ ಗೋಸಾಲ್ನನ್ನು ಕೆನಡಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಕಳೆದ ವಾರ ಭಾರತ ಮತ್ತು ಕೆನಡಾ ಅಂತಾರಾಷ್ಟ್ರೀಯ ಅಪರಾಧ ತಡೆಗೆ ಸಂಬಂಧಿಸಿದಂತೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ಆತನ ಬಂಧನವಾಗಿದೆ.
ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಿಸಿದ ವೀಸಾ ಶುಲ್ಕ ಹೆಚ್ಚಳ ಭಾರತೀಯರಲ್ಲಿ ಕಳವಳ ಉಂಟುಮಾಡಿದೆ, ಆದರೆ ವಿಶ್ವದ ಬೃಹತ್ ಮಾರುಕಟ್ಟೆಗಳಲ್ಲಿ ಒಂದಾದ ಭಾರತದಲ್ಲಿ ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತಿವೆ. ಭಾರತ ಸ್ವಾವಲಂಬನೆಯತ್ತ ಹೆಜ್ಜೆ ಹಾಕುತ್ತಿದೆ. ಹಾಗಾಗಿ ಭಾರತ ಆತಂಕಪಡುವ ಅಗತ್ಯವಿಲ್ಲವೆಂಬುದು ಸ್ಪಷ್ಟ.
ಅಂತಾರಾಷ್ಟ್ರೀಯ ನಿರ್ಬಂಧಗಳು, ಭಾರತದ ಆಪರೇಷನ್ ಸಿಂದೂರ ಕಾರ್ಯಾಚರಣೆ ಕೊಟ್ಟ ಏಟಿನಿಂದ ತತ್ತರಿಸಿರುವ ಪಾಕ್ ಪೋಷಿತ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ ಇದೀಗ ತನ್ನ ಹೆಸರನ್ನೇ ಬದಲಾಯಿಸಿಕೊಂಡಿದೆ. ಅಲ್ ಮುರಬಿತುನ್ (ಇಸ್ಲಾಂನ ರಕ್ಷಕರು) ಹೆಸರಿನಲ್ಲಿ ಕಾರ್ಯಾಚರಣೆ ನಡೆಸಲು ಆರಂಭಿಸಿದೆ.