ಕಾರಾಗೃಹ ಕೈದಿಗಳಿಗೆ ಪರಿವರ್ತನೆ ತಾಣವಾಗಬೇಕು: ಶ್ರೀಕಂಠರಾಜೇ ಅರಸ್
Sep 09 2024, 01:39 AM ISTಕಾರಾಗೃಹವು ಖೈದಿಗಳಿಗೆ ಮನ ಪರಿವರ್ತನೆಯ ತಾಣವಾಗಬೇಕು. ಆಕಸ್ಮಿಕವಾಗಿ ತಪ್ಪುಗಳು ಸಹಜ. ಆದರೆ ಅದನ್ನು ತಿದ್ದಿ ನಡೆಯುವುದರಲ್ಲಿ ನಿಜವಾದ ಅರ್ಥವಿದೆ ಎಂದು ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್ ತಿಳಿಸಿದರು. ಚಾಮರಾಜನಗರದಲ್ಲಿ ಸಾಕ್ಷರತಾ ದಿನಾಚರಣೆ, ಸಾಕ್ಷರತಾ ಸಪ್ತಾಹ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳ ವಿಜೇತ ಖೈದಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.