ನಕಲಿ ಕಾರ್ಮಿಕ ಕಾರ್ಡ್, ಸಚಿವ ಸಂತೋಷ್ ಲಾಡ್ ಅಸಮಾಧಾನ
Jul 19 2025, 01:00 AM ISTರಾಜ್ಯದಲ್ಲಿ ನಕಲಿ ಕಾರ್ಮಿಕ ಕಾರ್ಡ್ಗಳ ಹಾವಳಿ ಮಿತಿಮೀರಿದ್ದು, ಸ್ವತಃ ಸಚಿವ ಸಂತೋಷ್ ಲಾಡ್ ಅವರೇ ಇದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಶುಕ್ರವಾರ ಗದಗ ನಗರಕ್ಕೆ ಆಗಮಿಸಿದ ವೇಳೆಯಲ್ಲಿ ನಡೆಯಿತು. ಸಚಿವ ಸಂತೋಷ ಲಾಡ್ ಅವರನ್ನು ಭೇಟಿ ಮಾಡಿ, ವಿದ್ಯಾರ್ಥಿವೇತನ ಕಡಿತಗೊಂಡ ಬಗ್ಗೆ ಮನವಿ ಸಲ್ಲಿಸಲು ಬಂದಿದ್ದ ಕಟ್ಟಡ ಕಾರ್ಮಿಕರ ಎದುರೇ ಸಚಿವರು ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು.