ಇಂದು ಓಂ ಶಿವಂ ಚಿತ್ರ ರಾಜ್ಯಾದ್ಯಂತ ತೆರೆಗೆ
Sep 05 2025, 01:00 AM ISTಕೇವಲ 45 ದಿನಗಳಲ್ಲಿ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಿದ್ಧವಾಗಿರುವ ‘ಓಂ ಶಿವಂ’ ಕನ್ನಡ ಚಲನಚಿತ್ರ ಇದೇ ೫ ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಅಲ್ವಿನ್ ತಿಳಿಸಿದರು. ನಿರ್ಮಾಪಕ ಕೃಷ್ಣ ಅವರು ಮಾತನಾಡಿ, ಇದು ಇಡೀ ಕುಟುಂಬ ಒಟ್ಟಾಗಿ ಕುಳಿತು ನೋಡುವಂಥ ಸಿನಿಮಾ. ನಾಯಕ ಹೊಸಬನಾದರೂ, ತಾಂತ್ರಿಕ ತಂಡ ಅನುಭವಿಗಳು. ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದು ಹೇಳಿದರು. ನಾಯಕ ಭಾರ್ಗವ್ ಕೃಷ್ಣ ಮಾತನಾಡಿ, ಸೆಪ್ಟೆಂಬರ್ ೫ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಪ್ರೇಕ್ಷಕರು ಸಿನಿಮಾ ನೋಡಿ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.