ಸೀರೆಗೆ ಮ್ಯಾಚಿಂಗ್ ಬ್ಲೌಸ್ ಹಾಕೋದಾ, ಕಾಂಟ್ರಾಸ್ಟ್ ಕಲರ್ ಟ್ರೈ ಮಾಡೋದು ಅನ್ನೋದು ಸೀರೆ ಉಡೋ ನೀರೆಯರ ತಲೆ ಸಿಡಿಸುವ ಪ್ರಶ್ನೆ. ಇವರ ಸಮಸ್ಯೆಗೆ ಬಾಲಿವುಡ್ ಸೆಲೆಬ್ರಿಟಿಗಳು ಚೆಂದದ ಪರಿಹಾರ ಕೊಟ್ಟಿದ್ದಾರೆ.
ಪರಿಸರ ಮಹತ್ವ ಸಾರುವ ‘ಪಾಠಶಾಲಾ’ ಚಿತ್ರವು ನ.14ರಂದು ತೆರೆಗೆ ಬರಲಿದೆ. ಹೆದ್ದೂರು ಮಂಜುನಾಥ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಸುಧಾಕರ್ ಬನ್ನಂಜೆ, ಕಿರಣ್ ನಾಯಕ್, ಅಕ್ಷಯ್, ದಿಗಂತ್, ಮಿಥುನ್, ಆಯುಷ್, ಶ್ರೀಯಾನ್, ಅಹನ, ಗೌತಮಿ ನಟಿಸಿದ್ದಾರೆ.
ಅನೀಶ್ ತೇಜೇಶ್ಬರ್ ನಟನೆ, ನಿರ್ದೇಶನದ ‘ಲವ್ ಒಟಿಪಿ’ ಚಿತ್ರವು ನವೆಂಬರ್ 14 ರಂದು ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ತಂದೆ, ಮಗನ ಸಂಬಂಧ ಜೊತೆಗೆ ಪ್ರೀತಿ, ಪ್ರೇಮ ವಿಚಾರಗಳನ್ನು ಒಳಗೊಂಡ ಈ ಚಿತ್ರವನ್ನು ವಿಜಯ್ ರೆಡ್ಡಿ ನಿರ್ಮಿಸಿದ್ದಾರೆ.
ಬಿಡುಗಡೆಯಾದ ದಿನವೇ ಬ್ಲಾಕ್ ಬಸ್ಟರ್ ಹಿಟ್ ಆಗಿರುವ ‘ಕಾಂತಾರ ಚಾಪ್ಟರ್ 1’ ಎರಡನೇ ದಿನವೇ 100 ಕೋಟಿ ಕ್ಲಬ್ ಸೇರಿದೆ. ಭಾರತದಲ್ಲಿ ಸಿನಿಮಾದ ಅಂದಾಜು ಕಲೆಕ್ಷನ್ 106 ಕೋಟಿ ರು. ಎಂದು ಅಂದಾಜಿಸಲಾಗಿದೆ.