ಅಪರಿಚಿತ ಮಹಿಳೆ, ಪುರುಷ ಪ್ರತ್ಯೇಕವಾಗಿ ನೇಣು ಬಿಗಿದು ಆತ್ಮಹತ್ಯೆ
Jun 14 2025, 01:15 AM ISTಸುಮಾರು 5 ಅಡಿ ಎತ್ತರ, ಬಿಳಿ ತಲೆಗೂದಲು, ನೇರಳೆ ಕೆಂಪು ಸೀರೆ ಧರಿಸಿದ್ದು, 60 ರಿಂದ 65 ವರ್ಷದ ಮಹಿಳೆ ಮತ್ತು 5.3 ಅಡಿ ಎತ್ತರ, ಬಿಳಿ ತಲೆಗೂದಲು, ಬಿಳಿ ಕುರುಚಲು ಗಡ್ಡ ಹೊಂದಿರುವ ತಿಳಿ ಹಸಿರು ಬಣ್ಣದ ಟೀ ಶರ್ಟ್, ಬೆಲ್ಟ್ , ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದು, 65 ರಿಂದ 70 ವರ್ಷದ ಪುರುಷ ಇಬ್ಬರೂ ಪ್ರತ್ಯೇಕವಾಗಿ ಮರಕ್ಕೆ ಪ್ಲಾಸ್ಟಿಕ್ ಹಗ್ಗದಿಂದ ನೇಣು ಬಿಗಿದುಕೊಂಡಿದ್ದು, ಸಂಪೂರ್ಣವಾಗಿ ಇಬ್ಬರ ಶವಗಳು ಕೊಳೆತಿವೆ.