ಸಿಎಂ, ಡಿಸಿಎಂ, ಸಚಿವರ ವಿರುದ್ಧ ವಿಡಿಯೋ ಹರಿಬಿಟ್ಟವನ ಬಂಧನ
Dec 06 2024, 08:57 AM ISTಸಿಎಂ, ಡಿಸಿಎಂ, ಗೃಹ ಸಚಿವ, ಸಣ್ಣ ನೀರಾವರಿ ಸಚಿವ, ವಸತಿ ಸಚಿವ, ಇಂಧನ ಸಚಿವ ಸೇರಿ ೧೫ ಕ್ಕೂ ಅಧಿಕ ಸಚಿವರ ವಿರುದ್ಧ ಅವಾಚ್ಯ ಶಬ್ದದಿಂದ ನಿಂದಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ತಲೆಮರೆಸಿಕೊಂಡಿದ್ದ ಬಿಜೆಪಿ ಸಂಘಟಕನನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ.ದಾಬಸ್ಪೇಟೆ ತಾಲೂಕಿನ ನಲ್ಲೂರಿನ ಮೋಹಿತ್ ನರಸಿಂಹಮೂರ್ತಿ ಬಂಧಿತ ಆರೋಪಿ. ಈತ ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಸೇರಿ 15 ಸಚಿವರ ವಿರುದ್ಧ ವಿಡಿಯೋ ಮಾಡಿ ಹರಿದುಬಿಟ್ಟದ್ದನು.