ಹೊಸ ತಲೆಮಾರು ಸಾಹಿತ್ಯ ಓದದಿರುವುದಕ್ಕೆ ಹಳೆತಲೆಮಾರು ಕಾರಣ: ಪಾದೆಕಲ್ಲು ವಿಷ್ಣು ಭಟ್
May 01 2025, 12:48 AM ISTಕಿರಿಯರು ಓದುವ ವಾತಾವರಣವನ್ನು ಹಿರಿಯರು ನಿರ್ಮಾಣ ಮಾಡುತ್ತಿಲ್ಲ, ಹಿರಿಯರು ಮಕ್ಕಳು ಇಷ್ಟಪಟ್ಟು ಓದುವುದಕ್ಕೆ ಬಿಡದೇ ಇಂತಹದ್ದನ್ನೆ ಓದು, ಇದನ್ನ ಮಾತ್ರವೇ ಓದು ಎಂದು ನಿರ್ಬಂಧಿಸುತ್ತಿದ್ದಾರೆ. ಅಂಕಗಳನ್ನು ಪಡೆಯುವ ಗುರಿ ತೋರಿಸಿ ಮನಸ್ಸಂತೋಷವನ್ನೂ ಮನಃಸಂತೋಷವನ್ನೂ ನಿರಾಕರಿಸುತಿದ್ದಾರೆ. ಮಕ್ಕಳು ತಮ್ಮ ಪರಿಸರ, ಸಮಾಜದ ಪರಿಚಯವೂ ಇಲ್ಲದಂತೆ ಬಂಧಿಸುತಿದ್ದಾರೆ, ಕೌಟುಂಬಿಕ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಂತೆ, ತಮ್ಮವರೆಂಬ ಯಾರ ಪರಿಚಯವೂ ಆಗದಂತೆ ಕಟ್ಟಿ ಹಾಕುತಿದ್ದಾರೆ ಎಂದು ವಿದ್ವಾಂಸ ಪಾದೆಕಲ್ಲು ವಿಷ್ಣು ಭಟ್ ಹೇಳಿದರು.