ಎಸ್ಸೆಸ್ಸೆಲ್ಸಿ ಪರೀಕ್ಷೇಲಿ ಕೋಲಾರ ಜಿಲ್ಲೆಗೆ 14ನೇ ಸ್ಥಾನ
May 03 2025, 12:15 AM ISTಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ ೧೮೫೬೦ ಮಂದಿ ವಿದ್ಯಾರ್ಥಿಗಳ ಪೈಕಿ ೧೨೭೦೮ ಮಂದಿ ಉತ್ತೀರ್ಣರಾಗುವ ಮೂಲಕ ಜಿಲ್ಲೆಗೆ ಶೇ.೬೮.೩೭ ಫಲಿತಾಂಶದೊಂದಿಗೆ ೧೪ನೇ ಸ್ಥಾನ ಬಂದಿದ್ದು, ಜಿಲ್ಲೆಯ ಮುಳಬಾಗಿಲು ಅಮರಜ್ಯೋತಿ ಶಾಲೆಯ ಎಂ.ರಕ್ಷಾ ಹಾಗೂ ಕೆಜಿಎಫ್ ನಗರದ ಮಹಾವೀರ್ ಜೈನ್ ಶಾಲೆಯ ಎಸ್.ಭಾವನಿಕಾ ೬೨೪ ಅಂಕಗಳೊಂದಿಗೆ ಜಿಲ್ಲೆಗೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದ್ದಾರೆ.