ಮೊಬೈಲ್ ಗೀಳಿಗೆ ಬಲಿಯಾಗದೆ ಸಾಧನೆಯಡೆಗೆ ಮುನ್ನಡೆಯಿರಿ
Aug 04 2025, 11:45 PM ISTಯುವ ಜನತೆ ಪ್ರಸ್ತುತದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕಲಿಯುವ ವಯಸ್ಸಿನಲ್ಲಿ ಸಮಯ ವ್ಯರ್ಥ ಮಾಡುತ್ತಾ ದೇಶಕ್ಕೆ ಹೊರೆಯಾಗುತ್ತಿದ್ದಾರೆ. ಮಕ್ಕಳು ಮೊಬೈಲ್‌ಗಳಿಗೆ ಬಲಿಯಾಗದೇ ಉದ್ದೇಶವನ್ನರಿತು ತಮ್ಮ ಗುರಿಸಾಧನೆ ಕಡೆಗೆ ಮುನ್ನಡೆಯಬೇಕು ಎಂದು ಜಿಲ್ಲಾ ಪ್ರಧಾನ ಹಾಗೂ ಹಿರಿಯ ಸತ್ರ ನ್ಯಾಯಾಧೀಶರಾದ ಹೇಮಲತಾ ತಿಳಿಸಿದರು. ಮಕ್ಕಳು ನಮ್ಮ ಅಮೂಲ್ಯ ಆಸ್ತಿ, ನಿಮಗೆ ಸಮಾಜ, ಕುಟುಂಬ ಹಾಗೂ ದೇಶ ಉತ್ತಮ ಅವಕಾಶಗಳನ್ನು ಕಲ್ಪಿಸಿದೆ, ಉತ್ತಮ ಪೌಷ್ಠಿಕ ಆಹಾರ ಸಿಗುತ್ತದೆ. ಈ ಅವಕಾಶ ಬಳಸಿಕೊಂಡು ಉತ್ತಮ ಶಿಕ್ಷಣ ಪಡೆಯಿರಿ, ಹೊಸ-ಹೊಸ ಅನ್ವೇಷಣೆಯಲ್ಲಿ ತೊಡಗಿ ಸಾಧಿಸಿ, ದೇಶ ಮುನ್ನೆಡನೆ ಎಂದು ಆಶಯ ವ್ಯಕ್ತಪಡಿಸಿದರು.