ಉಡುಪಿ: ಶಿರೂರು ಮಠದ ಪರ್ಯಾಯಕ್ಕೆ 6ರಂದು ಬಾಳೆ ಮುಹೂರ್ತ
Dec 03 2024, 12:30 AM ISTಅಂದು ಬೆಳಗ್ಗೆ 6 ಗಂಟೆಗೆ ಮಠದಲ್ಲಿ ವಿಠಲ ದೇವರಿಗೆ ಮತ್ತು ಶ್ರೀ ಕೃಷ್ಣಮಠದಲ್ಲಿ ಕೃಷ್ಣ ಮುಖ್ಯಪ್ರಾಣ ದೇವರಿಗೆ, ರಥಬೀದಿಯಲ್ಲಿರುವ ಚಂದ್ರೇಶ್ವರ ಮತ್ತು ಅನಂತೇಶ್ವರ ದೇವರಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗುವುದು. ನಂತರ ಮಂಗಳವಾದ್ಯ, ವೇದಘೋಷ, ಭಜನೆಗಳೊಂದಿಗೆ ಮೆರವಣಿಗೆಯಲ್ಲಿ ತೆರಳಿ ಪೂರ್ಣಪ್ರಜ್ಞಾ ಕಾಲೇಜಿನ ಹಿಂಭಾಗದ ಅಬ್ಜಾರಣ್ಯದಲ್ಲಿ ಮಠದ ತೋಟದಲ್ಲಿ ಬಾಳೆಗಿಡ ನೆಟ್ಟು ಮುಹೂರ್ತ ನಡೆಸಲಾಗುತ್ತದೆ.