ಕಾಂಗ್ರೆಸ್ ಪರ ವಾತಾವರಣ: ನಂಜಯ್ಯನಮಠ
May 09 2024, 01:00 AM ISTಕನ್ನಡಪ್ರಭ ವಾರ್ತೆ ಅಮೀನಗಡ ಸಮೀಪದ ಸೂಳೇಬಾವಿ ಗ್ರಾಮದಲ್ಲಿ ಮತಗಟ್ಟೆ ಸಂಖ್ಯೆ 102 ರಲ್ಲಿ ಬಾಗಲಕೋಟೆ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮತ ಚಲಾಯಿಸಿದರು. ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ಬಾರಿ ಲೋಕಸಭೆಗೆ ವಿದ್ಯಾವಂತೆ ಹಾಗೂ ಕ್ರಿಯಾಶೀಲ ಅಭ್ಯರ್ಥಿಯನ್ನು ಕಾಂಗ್ರೆಸ್ ನಿಲ್ಲಿಸಿದ್ದು, ಜಿಲ್ಲೆಯ ಸಂಪೂರ್ಣ ಪ್ರಗತಿಗೆ ಕಂಕಣಬದ್ಧರಾಗಿದ್ದೇವೆ. ಕಾಂಗ್ರೆಸ್ ಗೆಲುವಿನ ಉತ್ತಮ ವಾತಾವರಣವಿದೆ ಎಂದರು.