ಕಾರು ಹರಿದು ವೃದ್ಧ ಭಿಕ್ಷುಕ ಸ್ಥಳದಲ್ಲೇ ಸಾವು
Jun 22 2024, 12:46 AM ISTಕಾರು ಹರಿದು ಅಂಗವಿಕಲ ವೃದ್ಧ ಭಿಕ್ಷುಕ ಸ್ಥಳದಲ್ಲೆ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಶನಿವಾರಸಂತೆ ಪಟ್ಟಣದಲ್ಲಿ ನಡೆದಿದೆ. ಸಾಲಿಗ್ರಾಮ ಮೂಲದ ಕೃಷ್ಣೇಗೌಡ (58) ಮೃತರು. ಸಾಲಿಗ್ರಾಮದ ಗಂಗೂರು ಗ್ರಾಮದವರಾದ ಕೃಷ್ಣೇಗೌಡ ಅಂಗವಿಕಲರಾಗಿದ್ದು ಕೆಲವು ದಿನಗಳಿಂದ ಪಟ್ಟಣದಲ್ಲಿ ಭಿಕ್ಷೆ ಯಾಚಿಸುತ್ತಿದ್ದು, ದುರಂತದಲ್ಲಿ ಮೃತಪಟ್ಟಿದ್ದಾರೆ.