ದಾವಣಗೆರೆಯಲ್ಲಿ ಮರದ ರೆಂಬೆ ಬಿದ್ದು ಕಾರು ಜಖಂ, ಜಗಳೂರಲ್ಲಿ ಕೊಚ್ಚಿಹೋದ ಕಾರು
May 22 2024, 12:55 AM ISTಸತತ ಐದನೇ ದಿನವೂ ಮಳೆರಾಯನ ಆರ್ಭಟ ಮುಂದುವರಿದಿದ್ದು, ಮೊದಲ ದಿನ ಸಂಜೆ ವೇಳೆ ಸುರಿದಿದ್ದ ಮಳೆರಾಯ ಕಳೆದೆರೆಡು ದಿನಗಳಿಂದ ರಾತ್ರೋರಾತ್ರಿ ಭಾರೀ ಕೃಪೆ ತೋರುವ ಮೂಲಕ ಜಿಲ್ಲಾದ್ಯಂತ ಕೃಷಿ ಚಟುವಟಿಕೆ ಗರಿಗೆದರಲು ಕಾರಣವಾಗಿದ್ದಾನೆ. ಈ ಮಧ್ಯೆ ನಗರದಲ್ಲಿ ರೆಂಬೆ ಬಿದ್ದು ಕಾರ್‌ವೊಂದು ಜಖಂಗೊಂಡರೆ, ಜಗಳೂರಲ್ಲಿ ಕಾರ್ ಕೊಚ್ಚಿಹೋದ ಘಟನೆಯೂ ನಡೆದಿದೆ.